ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾಗಿ ಬೃಹತ್ ಮರ ಧರೆಗುರುಳಿದೆ. ರಾಜಾಜಿನಗರದ ನಾಲ್ಕನೇ ಬ್ಲಾಕ್ ನ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದಿದೆ.
ಚಂದ್ರಮ್ಮ ಮತ್ತು ಪೀಟರ್ ಎಂಬುವರ ಮನೆಗಳ ಮೇಲೆ ಮರ ಬಿದ್ದಿದ್ದು, ಕಾಂಪೌಂಡ್ ಮೇಲೆ ಹಾಗೂ ಗೇಟ್ ಮೇಲೆ ಮರ ಬಿದ್ದು ಹಾನಿಯಾಗಿದೆ. 5 ಕಾರ್, ಟಾಟಾ ಏಸ್ ವಾಹನ, 4 ಬೈಕ್ ಮನೆಗಳ ಮೇಲೆ ಮರ ಬಿದ್ದ ಪರಿಣಾಮ ಜಖಂಗೊಂಡಿವೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಎರಡು ಕುಟುಂಬಗಳಿಗೆ ದಿಗ್ಬಂಧನ ವಿಧಿಸಿದಂತಾಗಿದೆ. ಮನೆಯಿಂದ ಹೊರಗೆ ಬರಲಾರದೆ ಎರಡು ಕುಟುಂಬದವರು ಪರದಾಟ ನಡೆಸಿದ್ದಾರೆ. ಬೆಳಗಿನಜಾವ 3.30ಕ್ಕೆ ಮರ ಬಿದ್ದಿದ್ದು, ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ದೂರಲಾಗಿದೆ.