HomeLatest NewsBREAKING: ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದವರ ಜಾಮೀನು ರದ್ದು: ದರ್ಶನ್ ಇರುವ ಜೈಲು ಪಾಲಾದ...

BREAKING: ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದವರ ಜಾಮೀನು ರದ್ದು: ದರ್ಶನ್ ಇರುವ ಜೈಲು ಪಾಲಾದ ಬೇಕರಿ ರಘು, ಯಶಸ್ವಿನಿ  

ಬೆಂಗಳೂರು: ರಾಮಯ್ಯನ ಪಾಳ್ಯ ಫಾರ್ಮ್ ಹೌಸ್ ನಲ್ಲಿ ನಟ ಪ್ರಥಮ್ ಗೆ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಜಾಮೀನು ರದ್ದುಪಡಿಸಲಾಗಿದೆ.

ದೊಡ್ಡಬಳ್ಳಾಪುರ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಜಾಮೀನು ಕ್ಯಾನ್ಸಲ್ ಮಾಡಲಾಗಿದೆ. ನ್ಯಾಯಾಧೀಶರು ಜಾಮೀನು ರದ್ದುಪಡಿಸಿ ಇಬ್ಬರನ್ನು ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದಲ್ಲಿ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಅವರು ಜಾಮೀನು ಪಡೆದ ಬಳಿಕವೂ ನಟ ಪ್ರಥಮ್ ಗೆ ಧಮ್ಕಿ ಹಾಕಿದ್ದರು ಎಂದು ಆರೋಪಿಸಲಾಗಿತ್ತು.

ಕಳೆದ ಶನಿವಾರ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಪ್ರಥಮ್ ದೂರು ನೀಡಿದ್ದರು. ಪ್ರಥಮ್ ದೂರಿನ ಪ್ರತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ಬೇಕರಿ ರಘು ಮತ್ತು ಯಶಸ್ವಿನಿ ಗೌಡ ಜಾಮೀನು ಕ್ಯಾನ್ಸಲ್ ಮಾಡಲಾಗಿದೆ. ಬೇಕರಿ ರಘು, ಯಶಸ್ವಿನಿ ಅವರು ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular