ಬೆಂಗಳೂರು : ಕರಾಮುವಿವಿಯಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
2025-26ರ ಜುಲೈ ಆವೃತ್ತಿಯಲ್ಲಿ ಯುಜಿಸಿ ಅನುಮೋದಿತ ಓಡಿಎಲ್ ಮಾದರಿಯ (ಆಫ್ಲೈನ್) ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಆನ್ಲೈನ್ ಮೂಲಕ ಉಲ್ಲೇಖ(1) ರ ಅಧಿಸೂಚನೆಗಳನ್ವಯ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಯುಜಿಸಿಯ ಉಲ್ಲೇಖ(2) ರಿಂದ (4)ರ ನಿರ್ದೇಶನಗಳು ಹಾಗೂ ಉಲ್ಲೇಖ(5)ರ ಟಿಪ್ಪಣೆಯನ್ವಯ ವಿದ್ಯಾರ್ಥಿಗಳು ಕೆಳಕಂಡ ಶಿಕ್ಷಣಕ್ರಮಗಳಿಗೆ ಮಾತ್ರ ವಿವಿಯ ಅಂತರ್ಜಾಲದಲ್ಲಿರುವ ಅಡ್ಮಿಷನ್ (https://ksouportal.com/views/StudentHome.aspx) , ಆಯಾ ಶಿಕ್ಷಣಕ್ರಮಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ವಿದ್ಯಾರ್ಹತೆಯನುಸಾರ ದಾಖಲಾತಿಗಳನ್ನು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿ ಮೈಸೂರು ಅಥವಾ ಹತ್ತಿರದ ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ಅನ್ನು ಅಥವಾ ಸಹಾಯವಾಣಿ ಸಂಖ್ಯೆ: 8690544544, ಅಥವಾ ಇಮೇಲ್ techsupport @ksouportal.com ಅಥವಾ ០៨ ៩ – ៩ : 0821-2500981, 0821-2519941/43/48/52 Extn: 592/590/351/2/3/5/6 ಅಥವಾ ಆಯಾ ಪ್ರಾದೇಶಿಕ ಕೇಂದ್ರಗಳನ್ನು ಸಂಪರ್ಕಿಸುವುದು / ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಪ್ರವೇಶಾತಿ ಪೂರ್ವ ಸಮಾಲೋಚನೆಗೆ ಮಾತ್ರ ಸಂಪರ್ಕಿಸುವುದು.
ಸಿದ್ದಪಾಠಗಳ ಸಾಫ್ಟ್ ಪ್ರತಿ / ಆಂತರಿಕ ನಿಬಂಧನೆ / ಇತರೆ ಶೈಕ್ಷಣಿಕ ಸೇವೆಗಳಿಗಾಗಿ ವಿವಿ ನಿಲಯವು ಹೊಸ ಅಪ್ KSOU Digital Academic Platform App – LMS) ಅನ್ನು ಸಿದ್ಧಪಡಿಸಿದ್ದು, ಅದನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿ ಕೊಂಡು, ತಮ್ಮ ನೊಂದಣಿ ಸಂಖ್ಯೆ / ಮೊಬೈಲ್ ಸಂಖ್ಯೆಯನ್ನು ದಾಖಲಿಸಿ ರಿಜಿಸ್ಟರ್ ಮಾಡಿಕೊಂಡು ಆ ಆಪ್ನಲ್ಲಿ ಮಾಹಿತಿ ಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಮೊಬೈಲ್ ಸಂಖ್ಯೆ: 9873037405/6360296451 ಅಥವಾ ಇಮೇಲ್ ksouacademicplatform@gmail.com ಅನ್ನು ಸಂಪರ್ಕಿಸುವುದು.ಪಜಾ/ಪಪ ವರ್ಗಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಭರಿಕೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟು ಶುಲ್ಕ ವಿನಾಯಿತಿ ಯೋಜನೆಯಡಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರವೇಶಾತಿಯು ವಿವಿಯ ವಿದ್ಯಾರ್ಥಿ ವೇತನ ಘಟಕವು ವಿಧಿಸುವ ಷರತ್ತಿಗೊಳಪಟ್ಟಿರುತ್ತದೆ.




