ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಯುವಕನೋರ್ವ ಕತ್ತರಿಯಿಂದ ಇರಿದು ಸ್ನೇಹಿತನನ್ನೇ ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಅರ್ಬಾಜ್ ನನ್ನು ಫರ್ಹಾದ್ ಎಂಬಾತ ಕೊಲೆ ಮಾಡಿದ್ದಾನೆ. ಅರ್ಬಾಜ್ ಹಾಗೂ ಫರ್ಹಾದ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಆದರೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ಅರ್ಬಾಜ್ ನನ್ನು ಫರ್ಹಾದ್ ಕೊಲೆ ಮಾಡಿದ್ದಾನೆ. ಕೈಯಲ್ಲಿದ್ದ ಕತ್ತರಿಯಿಂದ ಆತನ ಕುತ್ತಿಗೆಗೆ ಇರಿದಿದ್ದು, ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಅರ್ಬಾಜ್ ಮೃತಪಟ್ಟಿದ್ದಾನೆ. ಸದ್ಯ ಆರೋಪಿ ಫರ್ಹಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.