ಮೊರಾದಾಬಾದ್: 15 ದಿನಗಳ ಕಂದಮ್ಮ ನಿದ್ದೆ ಮಾಡುತ್ತಿಲ್ಲ ಎಂದು ಶಿಶುವನ್ನು ಹೆತ್ತ ತಾಯಿಯೇ ಫ್ರಿಡ್ಜ್ ನಲ್ಲಿ ಮಲಗಿಸಿದ ಘಟನೆ ಬೆಳಕಿಗೆ ಬಂದಿದೆ.
ಮೊರಾದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮಗು ನಿದ್ದೆ ಮಾಡುತ್ತಿಲ್ಲ ಎಂದು ತಾಯಿ, ಮಗುವನ್ನು ಫ್ರಿಡ್ಜ್ ನಲ್ಲಿ ಮಲಗಿಸಿದ್ದಾಳೆ. ಕಂದಮ್ಮನ ಅಳು, ಕೂಗಾಟ ಕೇಳಿದ ಅಜ್ಜಿ ತಕ್ಷಣ ಎಚ್ಚೆತ್ತು ಮಗುವನ್ನು ರಕ್ಷಿಸಿದ್ದಾರೆ.
ಮೊರಾದಾಬಾದ್ ನ ಜಬ್ಬರ್ ಕಾಲೋನಿಯಲ್ಲಿ ಮಹಿಳೆ 15 ದಿನಗಳ ಹಿಂದಷ್ಟೆ ಹೆರಿಗೆಯಾಗಿದ್ದಳು. ಹೆರಿಗೆ ಬಳಿಕ ಮಹಿಳೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ತನ್ನ ಮಗು ಎಷ್ಟುಹೊತ್ತಾದರೂ ಮಲಗುತ್ತಿಲ್ಲ ಎಂದು ಶಿಶುವನ್ನು ಎತ್ತಿಕೊಂಡು ಹೋಗಿ ಫ್ರಿಡ್ಜ್ ನಲ್ಲಿರಿಸಿದ್ದಾಳೆ. ಬಳಿಕ ತನ್ನ ರೂಮಿಗೆ ಹೋಗಿ ನಿದ್ರೆಗೆ ಜಾರಿದ್ದಾಳೆ. ಕೆಲ ಸಮದ ಬಳಿಕ ಶಿಶುವಿನಾ ಚಿರಾಟ ಕೇಳಿ ಗಾಬರಿಯಾದ ಅಜ್ಜಿ ಮಗುವನ್ನು ರಕ್ಷಿಸಿದ್ದಾರೆ. ಫ್ರಿಜ್ಡ್ ನಲ್ಲಿ ಮಗು ಕಂಡು ಕಂಗಾಲಾಗಿದ್ದು, ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿ, ಆರೋಗ್ಯದಿಂದ ಇರುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ.
ಮಹಿಳೆ ಹೆರಿಗೆ ಬಳಿಕ ಕೆಲವರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಸಂಬಂಧಿಕರ ಸಲಹೆಯಂತೆ ಮನೊ ವೈದ್ಯರ ಬಳಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.