ನವದೆಹಲಿ : ಸಂಸತ್ ನಲ್ಲಿ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಮೊದಲು ಪ್ರಧಾನಿ ಮೋದಿ ಮತದಾನ ಮಾಡಿದ್ದಾರೆ.
ಜಗದೀಪ್ ಧನಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯುತ್ತಿದೆ. ಲೋಕಸಭೆ, ರಾಜ್ಯಸಭೆ ಬಲಾಬಲ ಗಮನಿಸಿ ವಿಪಕ್ಷದ ಸುದರ್ಶನ್ ರೆಡ್ಡಿ ವಿರುದ್ಧ ಎನ್.ಡಿ.ಎ. ಅಭ್ಯರ್ಥಿ ರಾಧಾಕೃಷ್ಣನ್ ಆಯ್ಕೆಯಾಗುವುದು ಖಚಿತವಾಗಿದ್ದು,ಲೋಕಸಭೆಯ 543 ರಾಜ್ಯಸಭೆಯ 245 ಸದಸ್ಯರು ಸೇರಿ 788 ಸಂಸದರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಇವರನ್ನು ಎಲೆಕ್ಟ್ರೋರಲ್ ಕಾಲೇಜ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಲೋಕಸಭೆಯಲ್ಲಿ ಒಂದು ರಾಜ್ಯಸಭೆಯಲ್ಲಿ ಆರು ಸ್ಥಾನಗಳು ಖಾಲಿಯಿದ್ದು 781 ಸಂಸದರು ಮತ ಚಲಾಯಿಸಲಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ಗೌಪ್ಯ ಮತದಾನ ನಡೆಯಲಿದ್ದು, ಸಂಸದರು ಯಾವ ಅಭ್ಯರ್ಥಿಗೆ ಬೇಕಾದರೂ ಮತ ಹಾಕಬಹುದು. ಅಭ್ಯರ್ಥಿಗಳ ಹೆಸರಿನ ಮುಂದೆ 1 ಎಂದು ಬರೆಯುವ ಮೂಲಕ ಸಂಸದರು ಮತ ಚಲಾಯಿಸಲಿದ್ದಾರೆ. ಆಡಳಿತ ಮತ್ತು ವಿಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಸರಳ ಬಹುಮತ ಪಡೆದವರು ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ. ವಿಜೇತರಾಗಲು ಕನಿಷ್ಠ 391 ಮತಗಳ ಅಗತ್ಯವಿದೆ. ಇಂದೇ ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಗಲಿದೆ. ಎನ್.ಡಿ.ಎ. ಅಭ್ಯರ್ಥಿಯಾಗಿ ಸಿ.ಪಿ. ರಾಧಾಕೃಷ್ಣನ್, ಇಂಡಿಯಾ ಕೂಟದ ಅಭ್ಯರ್ಥಿಯಾಗಿ ಸುದರ್ಶನ್ ರೆಡ್ಡಿ ಸ್ಪರ್ಧಿಸಿದ್ದು, ಇವತ್ತೇ ಫಲಿತಾಂಶ ಪ್ರಕಟವಾಗಲಿದೆ.
#WATCH | Prime Minister Narendra Modi arrives at the Parliament House to cast his vote for the Vice Presidential election.
— ANI (@ANI) September 9, 2025
Voting for the post of Vice President to begin shortly. NDA nominee and Maharashtra Governor C.P. Radhakrishnan faces the Opposition INDIA bloc’s nominee… pic.twitter.com/e1xV7AlHD1
#WATCH | Prime Minister Narendra Modi leaves from the Parliament House after casting his vote for the Vice Presidential election.
— ANI (@ANI) September 9, 2025
(Video: DD News) pic.twitter.com/Kic17Kdebj