ಬೆಂಗಳೂರು : ಲವರ್’ ಗೆ ಮೆಸೇಜ್ ಮಾಡಿದ್ದಕ್ಕೆ ಯುವಕನೋರ್ವ ಸ್ನೇಹಿತನನ್ನೇ ರೈಲಿಗೆ ತಳ್ಳಿ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪ್ರಿಯತಮೆಗೆ ಮೆಸೇಜ್ ಮಾಡಿದ ಎಂದು ಕಾರಣಕ್ಕೆ ಸಿಟ್ಟಿಗೆದ್ದ ಯುವಕ ಚಲಿಸುವ ರೈಲಿಗೆ ಸ್ನೇಹಿತ ನನ್ನು ತಳ್ಳಿ ಕೊಲೆ ಮಾಡಿದ್ದು, ಈತನನ್ನು ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಲೆಯಾದ ಯುವಕನನ್ನು ಮಹದೇವಪುರ ಸಮೀಪದ ನಿವಾಸಿ ಇಸ್ಮಾಯಿಲ್ (25) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಮೃತನ ಸ್ನೇಹಿತ ಪುನೀತ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪ್ರತಾಪ್ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.
ದೊಡ್ಡ ನೆಕ್ಕುಂದಿ ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ.ಸ್ನೇಹಿತರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ವಿಜಯಪುರದ ಇಸ್ಮಾಯಿಲ್, ಚಿತ್ರದುರ್ಗದ ಪುನೀತ್ ಹಾಗೂ ಪ್ರತಾಪ್ ಗೂಡ್ಸ್ ಆಟೋ ಚಾಲಕರಾಗಿದ್ದು, ಮಹದೇವಪುರ ಸಮೀಪದ ಪಿಜಿಯಲ್ಲಿ ಅವರು ಒಟ್ಟಿಗೆ ವಾಸವಾಗಿದ್ದರು. ಯುವತಿಯೋರ್ವಳನ್ನು ಪುನೀತ್ಗೆ ಪ್ರೀತಿಸುತ್ತಿದ್ದನು. ತನ್ನ ಪ್ರಿಯತಮೆಯನ್ನು ಸ್ನೇಹಿತ ಇಸ್ಮಾಯಿಲ್ಗೆ ಪರಿಚಯ ಮಾಡಿಕೊಂಡಿದ್ದನು. ನಂತರ ಆಕೆ ಜತೆ ಇಸ್ಮಾಯಿಲ್ ಮೆಸೇಜ್ ಮಾಡುತ್ತಿದ್ದರು. ಈ ವಿಚಾರ ತಿಳಿದು ಪುನೀತ್ ಗಲಾಟೆ ಮಾಡಿದ್ದನು.
ನಂತರವೂ ಇಸ್ಮಾಯಿಲ್ ವಾಟ್ಸಾಪ್ನಲ್ಲಿ ಯುವತಿ ಜೊತೆ ಚಾಟಿಂಗ್ ಮುಂದುವರೆಸಿದ್ದನು. ಅಂತೆಯೇ ಭಾನುವಾರ ರಾತ್ರಿ ದೊಡ್ಡ ನೆಕ್ಕುಂದಿ ರೈಲ್ವೆ ಹಳಿಗಳ ಬಳಿಗೆ ಮಾತುಕತೆ ನೆಪದಲ್ಲಿ ಪುನೀತ್ನನ್ನು ಇಸ್ಮಾಯಿಲ್ ಕರೆದಿದ್ದ. ಆತನ ಜತೆ ಪ್ರತಾಪ್ ಕೂಡ ಬಂದಿದ್ದನು. ಈ ವೇಳೆ ಇಸ್ಮಾಯಿಲ್ ಹಾಗೂ ಪುನೀತ್ ನಡುವೆ ಗಲಾಟೆ ನಡೆದಿದೆ.
ರೈಲು ಬರುವ ವೇಳೆಗೆ ಇಸ್ಮಾಯಿಲ್ನನ್ನು ಜೋರಾಗಿ ಆರೋಪಿಗಳು ತಳ್ಳಿದ್ದಾರೆ. ಚಲಿಸುವ ರೈಲಿಗೆ ಸಿಲುಕಿ ಇಸ್ಮಾಯಿಲ್ ಮೃತಪಟ್ಟಿದ್ದಾನೆ.