ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ದರ ಪರಿಷ್ಕರಣೆ ಮಾಡಲಾಗಿದ್ದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ.
ಜಿಎಸ್ಟಿ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ವಾಹನ ತಯಾರಿಕಾ ಕಂಪನಿಗಳು ಮುಂದಾಗಿದ್ದು, ಸೆಪ್ಟೆಂಬರ್ 22 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ವಾಹನ ತಯಾರಿಕಾ ಕಂಪನಿ ಹುಂಡೈ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟರ್ಸ್ ಕಂಪನಿ ಜಿಎಸ್ಟಿ ದರ ಕಡಿತದ ಪರಿಣಾಮವಾಗಿ ತಮ್ಮ ವಾಹನಗಳ ಬೆಲೆ ಇಳಿಕೆಯಾಗುವುದನ್ನು ಪ್ರಕಟಿಸಿವೆ.
ಹುಂಡೈ ವೆರ್ನಾ ಮಾದರಿಯ ವಾಹನದ ಬೆಲೆ 60,640ರೂ., ಪ್ರೀಮಿಯಂ ಎಸ್.ಯು.ವಿ. ಟಕ್ಸನ್ ದರ 2.4 ಲಕ್ಷ ರೂ.ನಷ್ಟು ಕಡಿಮೆಯಾಗಲಿದೆ.
ಟಾಟಾ ಮೋಟಾರ್ಸ್ ಕಂಪನಿ ವಾಣಿಜ್ಯ ವಾಹನಗಳ ದರ 30 ಸಾವಿರ ರೂ.ನಿಂದ 4.65 ಲಕ್ಷ ರೂಪಾಯಿವರೆಗೆ ಕಡಿಮೆಯಾಗಲಿದೆ. ವಾಹನದ ಮಾದರಿಯನ್ನು ಆಧರಿಸಿ ದರ ಇಳಿಕೆ ಆಗಿರುತ್ತದೆ ಎಂದು ಹೇಳಲಾಗಿದೆ.