ಬೆಂಗಳೂರು: ರಾಜ್ಯ ಪಠ್ಯಕ್ರಮದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 12ರಿಂದ 19ರ ವರೆಗೆ ಅರ್ಧ ವಾರ್ಷಿಕ ಪರೀಕ್ಷೆ ನಡೆಯಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಪ್ರಶ್ನೆ ಪತ್ರಿಕೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧಪಡಿಸಿದೆ.
ಸೆಪ್ಟೆಂಬರ್ 12ರಂದು ಪ್ರಥಮ ಭಾಷೆ
ಸೆಪ್ಟೆಂಬರ್ 13ರಂದು ವಿಜ್ಞಾನ, ರಾಜ್ಯಶಾಸ್ತ್ರ, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ
ಸೆಪ್ಟೆಂಬರ್ 15 ರಂದು ದ್ವಿತೀಯ ಭಾಷೆ
ಸೆಪ್ಟೆಂಬರ್ 16ರಂದು ಗಣಿತ, ಸಮಾಜಶಾಸ್ತ್ರ
ಸೆಪ್ಟೆಂಬರ್ 17 ತೃತೀಯ ಭಾಷೆ, ಎನ್.ಎಸ್.ಕ್ಯೂ.ಎಫ್. ವಿಷಯಗಳು
ಸೆಪ್ಟೆಂಬರ್ 18ರಂದು ಸಮಾಜ ವಿಜ್ಞಾನ
ಸೆಪ್ಟೆಂಬರ್ 19 ರಂದು ಜೆಟಿಎಸ್ ವಿಷಯಗಳು ಪರೀಕ್ಷೆ ನಡೆಯಲಿದೆ.