ತಿರುಪತಿ: ನಾಳೆ ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಹಲವು ಪ್ರಮುಖ ದೇವಾಲಯಗಳು ಬಂದ್ ಆಗಲಿವೆ. ಅದರಂತೆ ಭೂವೈಕುಂಟ ಎಂದೇ ಪ್ರಸಿದ್ಧಿಪಡೆದಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನ ಕೂಡ ಬಂದ್ ಆಗಲಿದೆ.
ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಸ್ಥಾನ 12 ಗಂಟೆಗಳ ಕಾಲ ಬಂದ್ ಆಗಲಿದೆ. ನಾಳೆ ಮಧ್ಯಾಹ್ನ 3:30ರಿಂದ ತಿರುಪತಿ ದೇವಾಲಯ ಬಂದ್ ಆಗಲಿದೆ. ಸೆ.8ರಂದು ಬೆಳಗಿನ ಜಾವ 3ಗಂಟೆಯವರೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿದೆ.
ನಾಳೆ ರಾತ್ರಿ 9:58ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸೆ8ರ ಬೆಳಗಿನ ಜಾವ 1:31ರವರೆಗೆ ಚಂದ್ರಗ್ರಹಣವಿರಲಿದೆ. ಈ ಹಿನ್ನೆಲೆಯಲ್ಲಿ ನಾಲೆ ಮಧ್ಯಾಹ್ನ ತಿರುಪತಿ ದೇವಸ್ಥಾನ ಬಂದ್ ಆಗಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಸೆ.7ರ ಮಧ್ಯಾಹ್ನ 3 ಗಂಟೆಗೆ ಅನ್ನಪ್ರಸಾದ ಸ್ಥಗಿತಗೊಳ್ಳಲಿದೆ. ಸೆ.8ರಂದು ಬೆಳಿಗ್ಗೆ 6 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು. ಅಂದು ಬೆಳಿಗ್ಗೆ 8 ಗಂಟೆಯಿಂದ ಅನ್ನಪ್ರಸಾದ ಆರಂಭವಾಗಲಿದೆ ಎಂದು ತಿರುಪತಿ ತಿರುಮಲ ದೇಗುಲ ಟ್ರಸ್ಟ್ ಮಾಹಿತಿ ನೀಡಿದೆ.