‘ಬಾನು ಮುಷ್ತಾಕ್’ ದಸರಾ ಉದ್ಘಾಟನೆಯಿಂದ ಗೌರವಯುತವಾಗಿ ಹಿಂದೆ ಸರಿಯಲಿ : ಬಿಜೆಪಿ ಆಗ್ರಹ

ಬೆಂಗಳೂರು : ಬಾನು ಮುಷ್ತಾಕ್ ದಸರಾ ಉದ್ಘಾಟನೆಯಿಂದ ಗೌರವಯುತವಾಗಿ ಹಿಂದೆ ಸರಿಯಲಿ ಎಂದು ಬಿಜೆಪಿ ಆಗ್ರಹಿಸಿದೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ‘ನಾಡಹಬ್ಬ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ಕನ್ನಡಪರ ಸಂಘಟನೆಯಿಂದ ಹಿಡಿದು ಎಲ್ಲಾ ಸ್ತರದ ವ್ಯಕ್ತಿಗಳು, ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅದರೂ ಸಿಎಂ ಸಿದ್ದರಾಮಯ್ಯ ಅವರು ನಾಡಿನ ಭಕ್ತರ ಭಾವನೆಗೆ ಬೆಲೆ ಕೊಡುತ್ತಿಲ್ಲ.

ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ ಅವರನ್ನು ಉದ್ಘಾಟನೆಗೆ ಆಹ್ವಾನಿಸದೆ, ಕೇವಲ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ಮೂಲಕ ಕೋಮುಸೌಹಾರ್ದತೆಗೆ ಧಕ್ಕೆ ತರುವ ಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ.

ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರು ಜಾತಿ, ಮತಕ್ಕಿಂತಲೂ ಹೆಚ್ಚಿನ ಪ್ರೀತಿಯನ್ನು ಕನ್ನಡ ಭಾಷೆಯ ಮೇಲೆ ಇಟ್ಟಿದ್ದರಿಂದ ನಾಡಿನ ಜನತೆ ಅವರ ಆಹ್ವಾನವನ್ನು ಸ್ವಾಗತಿಸಿತ್ತು. ಆದರೆ ಬಾನು ಮುಷ್ತಾಕ್ ಅವರಿಗೆ ಎಲ್ಲಾ ಸ್ತರದಿಂದ ವಿರೋಧ ವ್ಯಕ್ತವಾಗುತ್ತಿರುವುದರಿಂದ ಉದ್ಘಾಟನೆಯಿಂದ ಗೌರವಯುತವಾಗಿ ಹಿಂದೆ ಸರಿಯಲಿ ಎಂದು ಬಿಜೆಪಿ ಆಗ್ರಹಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read