ಮಂಗಳೂರು: ಸೌಜನ್ಯಾ ತಾಯಿ ಕುಸುಮಾವತಿ ವಿರುದ್ಧ ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಪ್ರಕರ್ಣ ದಾಖಲಾಗಿದೆ.
ಸೌಜನ್ಯಾ ತಾಯಿ ಕುಸುಮಾವತಿ, ಅವರ ಪರ ಹೋರಾಟಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಭಾ ರೈ, ಯಶವಂತ ಶೆಟ್ಟಿ, ದೀಪಕ್ ಶೆಟ್ಟಿ, ಸರಸ್ವತಿ ಅಮಿತ್, ಅಮಿತ್ ಬಜ್ಪೆ, ಅನುಶೆಟ್ಟಿ, ನವೀನ್ ಗೌಡ್ರು, ಜೈ ಕುಂಜಪ, ಐ.ಎಂ.ಅಡ್ಮಿನ್, ಟ್ರೋಲ್ ಬಾಹುಬಲಿ, ರಾಜೇಶ್ ನಾಯ್ಕ್, ಟ್ರೋಲ್ ತಿಮ್ಮ ರೌಡಿ, ಶೆಟ್ಟಿ ತನುಷ್ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.