ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಸೈಬರ್ ವಂಚಕರು ನಿವೃತ್ತ ನೌಕರರೊಬ್ಬರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಿರ್ಮಲಾ ಸೀತಾರಾಮನ್ ಅವರ ಕಂಪನಿ ಎಂದು ಆನ್ ಲೈನ್ ಟ್ರೇಡಿಂಗ್ ಹೆಸರಲ್ಲಿ ಲಕ್ಷ ಲಕ್ಷ ಹಣ ದೋಚಿದ್ದಾರೆ. ವೇಣುಕುಮಾರ್ ಎಂಬುವವರು ನಿವೃತ್ತಿ ಬಳಿಕ ಬಂದ ಹಣವನ್ನು ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಲು ನೋಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಂಬಿಕಸ್ಥ ಕಂಪನಿಯ ಹುಡುಕಾಟದಲ್ಲಿದ್ದರು. ಈ ವೇಳೆ ಯೂಟ್ಯೂಬ್ ನೋಡುತ್ತಿದ್ದಾಗ ಟ್ರೇಡಿಂಗ್ ಕಂಪನಿಯೊಂದರ ಆಫರ್ ನೋಡಿದ್ದರು. ಇದು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರ ಕಂಪನಿ ಎಂದು ಹೇಳಲಾಗಿತ್ತು. ವೆಬ್ ಸೈಟ್ ಕಾಂಟ್ಯಾಕ್ಟ್ ಮಾಡಿದ ತಕ್ಷಣ ಮ್ಯಾನೇಜರ್ ಎಂದು ಕರೆಬಂದಿತ್ತು.
ಕಡಿಮೆ ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭಗಳಿಸುವ ಉದ್ದೇಶವನ್ನು ವೇಣುಕುಮಾರ್ ಹೊಂದಿದ್ದರು. ಹಾಗಾಗಿ ಆರಂಭದಲ್ಲಿ 22 ಸಾವಿರ ಹಣ ಹೂಡಿಕೆ ಮಾಡಿದ್ದರು. ಬಳಿಕ 1 ಲಕ್ಷದ 4 ಸಾವಿರ ಹಣ ಅಕೌಂಟ್ ನಿಂದ ಕಡಿತಗೊಂಡಿದೆ. ಹಣ ಕಳೆದುಕೊಂಡಾಗ ವೆಂಕಟ ಕುಮಾರ್ ಗಾಬರಿಯಾಗಿದ್ದಾರೆ. ತಕ್ಷಣ ವಿದ್ಯಾರಣ್ಯಪುರ ಠಾಣೆಗೆ ತೆರಳಿ ದೂರು ನೀಡಿದ್ದಾರೆ.