ಸಂಚಾರ ನಿಯಮ ಉಲ್ಲಂಘಿಸಿದ ಸಿಎಂಗೇ ದಂಡಾಸ್ತ್ರ ಪ್ರಯೋಗ: ಶೇ. 50 ರಿಯಾಯಿತಿ ಬಳಸಿ ದಂಡ ಪಾವತಿಸಿದ ಸಿದ್ದರಾಮಯ್ಯ

ಬೆಂಗಳೂರು: ಸೀಟ್ ಬೆಲ್ಟ್ ಹಾಕದೆ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಿ ಕಾರ್ ವಿರುದ್ಧ 7 ಪ್ರಕರಣ ದಾಖಲಾಗಿದ್ದು, ದಂಡಪಾವತಿಗೆ ಇರುವ ಶೇಕಡ 50 ರಿಯಾಯಿತಿ ಸೌಲಭ್ಯ ಬಳಸಿಕೊಂಡು ಅವರು ದಂಡ ಪಾವತಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಬಳಸುವ ಸರ್ಕಾರಿ ಕಾರ್ ನ ಮೇಲೆ 2,000 ದಂಡ ಪಾವತಿಸಲಾಗಿದೆ. ಈ ಕಾರ್ ಮೇಲೆ ನಿಯಮ ಉಲ್ಲಂಘನೆ ಸಂಬಂಧ 7, ಕೇಸ್ ಗಳು ಬಾಕಿ ಇದ್ದು, 2000 ರೂ. ದಂಡ ಪಾವತಿಸಬೇಕಿತ್ತು. ಆರು ಬಾರಿ ಸೀಟ್ ಬೆಲ್ಟ್ ಧರಿಸದೆ, ಒಮ್ಮೆ ವೇಗದ ಚಾಲನೆಗೆ ದಂಡ ಹಾಕಲಾಗಿದೆ. ಸಿಎಂ ಅವರು ತಮ್ಮ ಕಾರ್ ನ ಮೇಲೆ ಹಾಕಿರುವ ದಂಡ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read