ಬೀದರ್: ಉದ್ದಿನ ರಾಶಿ ಮಾಡುವಾಗ ಯಂತ್ರಕ್ಕೆ ಸಿಲುಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಔರಾದ್ ತಾಲೂಕಿನ ಜಮಗಿ ಗ್ರಾಮದಲ್ಲಿ ನಡೆದಿದೆ.
ಮಲಗೊಂಡ ಬೂದರೆ(40) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಉದ್ದಿನ ರಾಶಿ ಯಂತ್ರದ ಆಪರೇಟರ್ ಆಗಿರುವ ಮಲಗೊಂಡ ಬುಧವಾರ ಮಧ್ಯಾಹ್ನ ಮಹಾಜವಾಡಿ ಶಿವಾರದಲ್ಲಿ ಉದ್ದಿನ ರಾಶಿ ಯಂತ್ರ ಆಪರೇಟ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಯಂತ್ರಕ್ಕೆ ಸಿಲುಕಿದ್ದ ಮಲಗೊಂಡ ಅವರ ದೇಹ ಛಿದ್ರವಾಗಿದೆ. ಸಂತಪೂರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಪತ್ನಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.