ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜಣ್ಣ ಪುತ್ರ, ಎಂಎಲ್ ಸಿ ರಾಜೇಂದ್ರ, ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಇದೇ…ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ ಸಿ ರಾಜೇಂದ್ರ, ಸೆಪ್ಟೆಂಬರ್ ಕ್ರಾಂತಿ ಹೆಚ್.ಸಿ ಬಾಲಕೃಷ್ಣರಿಂದಲೇ ಶುರುವಾಗುತ್ತಿದೆ. ಕೆ.ಎನ್.ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿ ಇದೇ ಎಂದು ಹೇಳಿದರು.
ಮಾಗಡಿ ಬಾಲಕೃಷ್ಣ ಟೀಮ್ ಬಿಜೆಪಿಗೆ ಹೋಗಬಹುದು. ಸಿಎಂ ಮಾಡುತ್ತೇವೆ ಎಂದರೆ ಇವರೆಲ್ಲ ಬಿಜೆಪಿಗೆ ಹೋಗಬಹುದು. ಹೆಚ್.ಸಿ.ಬಾಲಕೃಷ್ಣ ಬಿಜೆಪಿ ಹಾಗೂ ಜೆಡಿಎಸ್ ನ್ನು ಮುಗಿಸಿ ಬಂದಿದ್ದಾರೆ. ಕೆಲವರಿಗೆ ಮಾತನಾಡುವ ತೆವಲು. ಅದನ್ನು ತೀರಿಸಿಕೊಳ್ಳಲು ಹೀಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜಣ್ಣ ಯಾವತ್ತೂ ಪಕ್ಷದ ವಿರುದ್ಧ ಮಾತನಾಡಿಲ್ಲ. ರಾಜಣ್ಣ ಅವರನ್ನು ಟೀಕಿಸಿದರೆ ಬಾಲಕೃಷ್ಣ ಅವರಿಗೆ ಮೈಲೇಜು ಸಿಗುತ್ತದೆ. ಇವರೆಲ್ಲಾ ಸೇರಿ ಷಡ್ಯಂತ್ರ ನಡೆಸಿಯೇ ತಾನೆ ರಾಜಣ್ಣ ಅವರನ್ನು ಸಂಪುಟದಿಂದ ತೆಗೆದಿದ್ದು. ಆದ ತಪ್ಪಿಗೆ ಮತ್ತೆ ರಾಜಣ್ಣ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಶಾಂತಿಯುತ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದರು.