ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ ಎಂದು ಯೂಟ್ಯೂಬರ್ ಸಮೀರ್ ಎಂ.ಡಿ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಮೀರ್ ಎಂ.ಡಿ ನನಗೆ ಈವರೆಗೆ ಎಸ್ ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನನಗೆ ಬೆಳ್ತಂಗಡಿ ಠಾಣೆ ಪೊಲೀಸರಿಂದ ನೋಟಿಸ್ ಬಂದಿತ್ತು. ಅದಕ್ಕಾಗಿ ಮೂರು ದಿನ ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹೋಗಿದ್ದೆ. ವಿಚಾರಣೆ ಮುಗಿದಿದೆ. ಎಲ್ಲಾ ವಿಷಯದ ಬಗ್ಗೆ ಶೀಘ್ರದಲ್ಲಿಯೇ ಕ್ಲಾರಿಟಿ ಕೊಡುತ್ತೇನೆ ಎಂದು ತಿಳಿಸಿದರು.
ವಿದೇಶದಿಂದ ಫಂಡಿಂಗ್ ವಿಚಾರವಾಗಿ ಪ್ರತಿಕ್ರೊಯಿಸಿದ ಸಮೀರ್, ನಾನು ಆ ವಿಚಾರದ ಬಗ್ಗೆ ಮಾತನಾಡಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಸತ್ಯ ಹೊರಬರುತ್ತದೆ. ಆರೋಪಗಳಿಗೆಲ್ಲಾ ಉತ್ತರಕೊಡುತ್ತಿರಲು ಆಗುವುದಿಲ್ಲ. ತನಿಖೆ ಬಳಿಕ ಪೊಲೀಸರೇ ಎಲ್ಲವನ್ನೂ ಬಹಿರಂಗ ಪಡಿಸುತ್ತಾರೆ ಎಂದು ಹೇಳಿದರು.