ಯಾದಗಿರಿ: ಕೆಂಭಾವಿ ಪಟ್ಟಣದಲ್ಲಿ ಸಾವಿನಲ್ಲಿಯೂ ಇಬ್ಬರು ಸಹೋದರರು ಒಂದಾಗಿದ್ದಾರೆ. ಹೃದಯಾಘಾತದಿಂದ ಇಬ್ಬರು ಸಹೋದರರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ನಡೆದಿದೆ.
ಶಂಶೋದ್ದೀನ್(42), ಇರ್ಫಾನ್(38) ಮೃತಪಟ್ಟ ಸಹೋದರರು ಎಂದು ಹೇಳಲಾಗಿದೆ. ಅಣ್ಣನಿಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿದು ತಮ್ಮನಿಗೂ ಹೃದಯಘಾತ ಉಂಟಾಗಿದೆ. ಎದೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರೂ ಸಹೋದರರು ಸಾವನ್ನಪ್ಪಿದ್ದಾರೆ. ಸಾವಿನಲ್ಲೂ ಇಬ್ಬರು ಸಹೋದರರು ಒಂದಾಗಿದ್ದಾರೆ.
ಸಹೋದರರ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.