ನವದೆಹಲಿ: ಇತ್ತೀಚಿನ ದಿನಗಳಲ್ಲಿ ಗಂಡ-ಮಕ್ಕಳನ್ನು ಬಿಟ್ಟು ಪ್ರೀಯಕರನೊಂದಿಗೆ ಓಡಿ ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮದುವೆಯಾಗಿ, ಮಕ್ಕಳಿದ್ದರೂ ಅಕ್ರಮ ಸಂಬಂಧ ಬೆಳೆಸಿ ಪ್ರೇಮಿ ಜೊತೆ ಹೋಗಲು ಪತಿಯನ್ನೇ ಕೊಲೆಗೈದಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹ ಘಟನೆಗಳ ನಡುವೆ ಇಲ್ಲೋಂದು ಮಹಿಳೆ ಪತಿ, ಇಬ್ಬರು ಮಕ್ಕಳನ್ನು ತಿರೆದು ತನ್ನ ಪ್ರಿಯತಮನೊಂದಿಗೆ ವಿವಾಹವಾಗಿ ಹೋಗಿದ್ದಾಳೆ. ಮಕ್ಕಳಿಬ್ಬರೂ ನಮ್ಮನ್ನು ಬಿತ್ಟು ಹೋಗದಂತೆ ಗೋಗರೆಯುತ್ತಿದ್ದರೂ ಹೆತ್ತ ತಾಯಿ ಮನಸ್ಸು ಕರಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ದೃಶ್ಯ ಮಕ್ಕಳ ಸ್ಥಿತಿಯನ್ನು ಕಂಡು ಎಂಥವರ ಹೃದಯವೂ ಹಿಂಡುವಂತಿದೆ.
ಮಹಿಳೆ ತನ್ನ ಪತಿ, ಪುಟ್ಟ ಮಕ್ಕಳನ್ನು ಬಿಟ್ಟು ಪ್ರೇಮಿಯನ್ನೇ ವಿವಾಹವಾಗಿ ಹೋಗುತ್ತಿದ್ದಾಳೆ. ಮಕ್ಕಳಿಬ್ಬರೂ ಅಮ್ಮ ನಮ್ಮನ್ನು ಬಿಟ್ಟು ಹೋಗಬೇಡ ಎಂದು ಕಣ್ಣೀರಿಟ್ಟು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದರೂ ತಾಯಿ ಅವರನ್ನು ನೂಕಿ ಗದರಿದ್ದಾಳೆ. ಹೆತ್ತಮ್ಮನನ್ನು ಕಳೆದುಕೊಳ್ಳಲು ಇಷ್ಟವಿಲ್ಲದೇ ಮಕ್ಕಳು ಒದ್ದಾಡುತ್ತಿದ್ದಾರೆ. ಆದರೂ ತಾಯಿಗೇ ತನ್ನ ಸ್ವಾರ್ಥವೇ ಮುಖ್ಯವಾಗಿದೆ. ಮಕ್ಕಳು, ಪತಿಯನ್ನು ಬಿಟ್ಟು ಪ್ರಿಯತಮನೊಂದಿಗೆ ತೆರಳಿದ್ದಾಳೆ.
ಹತಾಶರಾದ ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ಎಂಥವರ ಮನಸ್ಸನ್ನೂ ಕದಡಿಬಿಡುವಂತಿದೆ. ತಾಯಿ ಪ್ರೀತಿ ನಿಷ್ಕಲ್ಮಶವಾದದು ಎನ್ನುತ್ತಾರೆ. ಆದರೆ ಅದು ಇತ್ತೀಚೆಗೆ ಸ್ವಾರ್ಥವಾಗಿ ಬದಲಾಗುತ್ತಿರುವ ಅದೆಷ್ಟೋ ಪ್ರಸಂಗಗಳು ಸಮಾಜದಲ್ಲಿ ಕಾಣುತ್ತಿದ್ದೇವೆ. ವಾತ್ಸಲ್ಯ ಎಂಬುದು ಮಾನವೀಯತೆಯ ನೆಲೆಯನ್ನೂ ಕಳೆದುಕೊಳ್ಳುತ್ತಿರುವುದು ದುರಂತವೇ ಸರಿ.