ಬೆಳಗಾವಿ: ಅತ್ಯಾಚಾರ, ದರೋಡೆ ಗ್ಯಾಂಗ್ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಆರೋಪಿ ರಮೇಶ್ ಕಿಲ್ಲಾರ್ ಕಾಲಿಗೆ ಕಿತ್ತೂರು ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಕಾನ್ಸ್ ಟೇಬಲ್ ಶರೀಫ್ ಎಂಬುವವರಿಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಪ್ರವೀಣ್ ಗೊಂಗೊಳ್ಳಿ ಫೈರಿಂಗ್ ನಡೆಸಿದ್ದಾರೆ. ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.
ಆರೋಪಿ ರಮೇಶ್ ಕಿಲ್ಲಾರ್ ಹಾಗೂ ಗಾಯಾಳು ಪಿಸಿ ಇಬ್ಬರನ್ನೂ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.