ಮಂಗಳೂರು: ನಾನೆಂದೂ ಸತ್ಯವನ್ನು ಬಿಟ್ಟು ಹೋಗಿಲ್ಲ. ಎಲ್ಲರೂ ಶಾಂತತೆಯನ್ನು ಕಾಪಾಡಬೇಕು, ತಳ್ಮೆಯಿಂದ ಇರುವಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕ್ಷೇತ್ರದಲ್ಲಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ, ಕ್ಷೇತ್ರಕ್ಕೆ ಭಟ್ಟಾಚಾರ್ಯರು ಬಂದಿರುವುದು ದೊಡ್ಡ ವಿಷಯ. ಎಲ್ಲಾ ಜೈನ ಸ್ವಾಮೀಜಿಗಳು ನಮ್ಮ ಜೊತೆಗಿದ್ದೇವೆ ಎಂದಿದ್ದಾರೆ. ಎಸ್ ಐಟಿ ತನಿಖೆ ನಡೆಯುತ್ತಿದೆ. ಹೆಚ್ಚು ಮಾತನಾಡುವುದು ಬೇಡ ಎಂದು ಆದೇಶ ಆಗಿದೆ ಎಂದು ಹೇಳಿದರು.
ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ನೆಮ್ಮದಿ ಇಲ್ಲ ಎಂದು ಭಕ್ತರು ಹೇಳುತ್ತಿದ್ದಾರೆ. ಹೆಣ್ಣುಮಕ್ಕಳು ಎಲ್ಲಾ ರೀತಿಯಲ್ಲೂ ಪ್ರತಿಭಟನೆಗೆ ತಯಾರಾಗಿದ್ದಾರೆ. ಆದರೆ ಎಲ್ಲರೂ ಸಂಯಮದಿಂದ ಇರಿ. ಈಗ ನಮಗೆ ಫಲ ಸಿಗುತ್ತಿದೆ ಎಂದು ತಿಳಿಸಿದ್ದಾರೆ.