ಮಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಕೂಡ ಸುಜಾತಾ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಎಸ್ ಐಟಿ ಠಾಣೆಗೆ ಇಂದೂ ಕೂಡ ಸುಜಾತಾ ಭಟ್ ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ ರಾತ್ರಿ ೧೦ ಗಂತೆಯವರೆಗೆ ಎಸ್ ಐಟಿ ಅಧಿಕಾರಿಗಳು ಸುಜಾತಾ ಭಟ್ ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ಸುಜಾತಾ ಭಟ್ ಉಜಿರೆ ಲಾಡ್ಜ್ ಗೆ ಆಟೋದಲ್ಲಿ ತೆರಳಿದ್ದರು.
ಧರ್ಮಸ್ಥಳದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ನನ್ನ ಮಗಳು ಅನನ್ಯಾ ಭಾಟ್ ಏಕಾಏಕಿ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಎಸ್ ಐಟಿಗೆ ವಹಿಸುತ್ತಿದಂತೆ ಅನನ್ಯಾ ಭಟ್ ಎಂಬ ಮಗಳೇ ತನಗಿಲ್ಲ. ತಾನು ಹೇಲಿದ್ದು ಸುಳ್ಳು ಎಂದು ಉಲ್ಟಾ ಹೊಡೆದಿದ್ದರು. ಬಳಿಕ ತನಗೆ ಈ ರೀತಿ ಹೇಳುವಂತೆ ಕೆಲವರು ನನ್ನ ಮೇಲೆ ಹಲ್ಲೆ ನಡೆಸಿ, ಹೆದರಿಸಿ ಹೇಳಿಸಿದ್ದಾರೆ ಎಂದಿದ್ದರು. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಸುಜಾತಾ ಭಟ್ ವಿಚಾರಣೆ ನಡೆಸುತ್ತಿದ್ದಾರೆ. ಇಂದು ವಿಚಾರಣೆ ನ್ಬಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಕೂಡ ಸುಜಾತಾ ಭಟ್ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ.