ಬೆಂಗಳೂರು: ನಕಲಿ ಮಾನವ ಹಕ್ಕುಗಳ ಅಧಿಕಾರಿ ಪರಿಚಯ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
ಗಿರೀಶ್ ಮಟ್ಟಣ್ಣವರ್ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ದಕ್ಷಿಣ ಕನ್ನಡ ಎಸ್ ಪಿಗೆ ಸೂಚನೆ ನೀಡಿದೆ. ಸೆ.21ರೊಳಗೆ ತನಿಖೆ ವರದಿ ನೀಡುವಂತೆಯೂ ಸೂಚಿಸಿದೆ.
ಗಿರೀಶ್ ಮಟ್ಟಣ್ಣವರ್ ಬೆಳ್ತಂಗಡಿ ಠಾಣೆ ಮುಂದೆ ನೀಡಿದ್ದ ಹೇಳಿಕೆ ಭಾರಿ ವೈರಲ್ ಆಗಿತ್ತು. ಅವರ ಹಿಂದೆ ಸೂಟ್ ಹಾಕಿಕೊಂಡಿದ್ದ ವ್ಯಕ್ತಿಯೋರ್ವ ನಿಂತಿದ್ದರು. ಆತ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎನ್ನಲಾಗಿತ್ತು. ಅಸಲಿಗೆ ಆತ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಅಲ್ಲ, ಬದಲಾಗಿ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಎನ್ ಜಿಓವೊಂದರ ಪದಾಧಿಕಾರಿ. ಮಾತ್ರವಲ್ಲ ಓರ್ವ ರೌಡಿ ಶೀಟರ್ ಎಂದು ತಿಳಿದುಬಂದಿದೆ.