ಬೆಂಗಳೂರು : ಸಾರ್ವಜನಿಕರೇ ಗಮನಿಸಿ, ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾ, ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಬೇಕಾ..? ನೀವು ಏನು ಮಾಡಬೇಕು..? ಹೇಗೆ ದೂರು ನೀಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ@osd_cmkarnatakaʼಎಕ್ಸ್ʼ ಖಾತೆಗೆ ಟ್ಯಾ ಗ್ ಮಾಡಬಹುದಾಗಿದೆ.
ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಂದು ಕೊರತೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ . ಕುಂದುಕೊರತೆ ಬಗ್ಗೆ ಈ ಹಿಂದೆ ಯಾವುದೇ ಕಚೇರಿ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಕಚೇರಿ ಸ್ವೀಕೃತಿ ಪತ್ರ ಲಗತ್ತಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸುವುದು.
ನಿಮ್ಮ ಸಮಸ್ಯೆಗೆ ಹೀಗೆ ಪರಿಹಾರ
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವು ತುಂಗಭದ್ರಾ ನದಿ ಮಧ್ಯದ ನಡುಗದ್ದೆಯಲ್ಲಿರುವುದರಿಂದ ಗ್ರಾಮದ ಜನರು ಸ್ಮಶಾನ ತಲುಪಲು ಆಳೆತ್ತರ ಹರಿಯುತ್ತಿರುವ ನದಿಯನ್ನು ದಾಟಿ ಹರಸಾಹಸ ಪಡಬೇಕಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಸದರಿ ಗ್ರಾಮದ ಸಾರ್ವಜನಿಕರು ಮುಕ್ಕುಂದಾ ಗ್ರಾಮದ ಜಮೀನಿನಲ್ಲಿ 01- 3 ಗುಂಟೆ ಜಮೀನು ಲಭ್ಯವಿದ್ದರೂ ಕೂಡ ತುಂಗಾಭದ್ರಾ ನದಿಯಲ್ಲಿ ಶವಸಂಸ್ಕಾರ ಮಾಡುತ್ತಿರುವುದು ಕಂಡುಬಂದಿರುತ್ತದೆ. ಸದ್ಯ ಲಭ್ಯವಿರುವ ಸ್ಮಶಾನ ಭೂಮಿಯು ಯೋಗ್ಯವಿರುವುದಿಲ್ಲ. ಹೀಗಾಗಿ ಗ್ರಾಮದ ಸಾರ್ವಜನಿಕರ ಬೇಡಿಕೆಯಂತೆ ಸರ್ವೆ ನಂ 242ರಲ್ಲಿ 6-18 ಗುಂಟೆ ಗಾಯಿರಾಣ ಸರ್ಕಾರಿ ಜಮೀನಿನ ಪೈಕಿ 2 ಎಕರೆ ಜಮೀನನ್ನು ಗ್ರಾಮದ ಸಾರ್ವಜನಿಕ ಸ್ಮಶಾನಕ್ಕಾಗಿ ಜಮೀನು ಕಾಯ್ದಿರಿಸಲು ಶೀಘ್ರವಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಸಿಂಧನೂರು ತಾಲ್ಲೂಕಿನ ತಹಶೀಲ್ದಾರರು ತಿಳಿಸಿದ್ದಾರೆ.
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
— DIPR Karnataka (@KarnatakaVarthe) August 25, 2025
ಬೆಂಗಳೂರಿನ ವಿಜಯನಗರದ ಅಮರಜ್ಯೋತಿ ನಗರ 6ನೇ ಅಡ್ಡ ರಸ್ತೆಯಲ್ಲಿ ರೋಡ್ ಹಂಪ್ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ರೋಡ್ ಹಂಪ್ ಅಳವಡಿಸಿಕೊಡುವಂತೆ ಅನಂತರಾಜು ಎಂಬುವವರು ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗಕ್ಕೆ ಕೋರಿದ್ದರು. ಇದನ್ನು ಗಮನಿಸಿದ ವಿಶೇಷ… pic.twitter.com/ih8V5cRtYw
ಮುಖ್ಯಮಂತ್ರಿಯವರ ಕಚೇರಿಯಿಂದ ಮಾಧ್ಯಮ ಪ್ರಕಟಣೆ
— DIPR Karnataka (@KarnatakaVarthe) August 28, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವು ತುಂಗಭದ್ರಾ ನದಿ ಮಧ್ಯದ ನಡುಗದ್ದೆಯಲ್ಲಿರುವುದರಿಂದ ಗ್ರಾಮದ ಜನರು ಸ್ಮಶಾನ ತಲುಪಲು ಆಳೆತ್ತರ ಹರಿಯುತ್ತಿರುವ ನದಿಯನ್ನು ದಾಟಿ ಹರಸಾಹಸ ಪಡಬೇಕಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಇದನ್ನು… pic.twitter.com/mk5Dpqgyb0