ತುಮಕೂರು : ತುಮಕೂರಿನಲ್ಲಿ ಯುವತಿ ಅಶ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ಮನೆಯಲ್ಲೇ ನೇಣು ಬಿಗಿದುಕೊಂಡು ಅಶ್ವಿನಿ (20) ಸೂಸೈಡ್ ಮಾಡಿಕೊಂಡಿದ್ದರು. ಈಕೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಮೊದಲು ಹೊಟ್ಟೆನೋವಿನಿಂದ ಬೇಸತ್ತು ಅಶ್ವಿನಿ ಸಾವಿನ ಹಾದಿ ಹಿಡಿದಿದ್ದಳು ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆಗೂ ಮುನ್ನ ಅಶ್ವಿನಿ ನೇಣು ಕುಣಿಕೆಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದಳು. ಮೊಬೈಲ್ ನಲ್ಲಿ ಸಾವಿನ ರಹಸ್ಯ ಪತ್ತೆಯಾಗಿದೆ. ಮೊಬೈಲ್ ನಲ್ಲಿ ಅಶ್ವಿನಿ ತನ್ನ ಪ್ರಿಯಕರ ಚೇತನ್ ಗೆ ಮೆಸೇಜ್ ಮಾಡಿದ್ದಳು.
ಸಿದ್ದನಕಟ್ಟೆ ಗ್ರಾಮದ ಅಶ್ವಿನ ಅದೇ ಊರಿನ ಯುವಕ ಚೇತನ್ನನ್ನು ಪ್ರೀತಿಸುತ್ತಿದ್ದಳು. ಆದರೆ ಯುವಕ ಮತ್ತೋರ್ವ ಯುವತಿ ಜೊತೆ ಸಂಬಂಧ ಹೊಂದಿದ್ದನು. ಈ ವಿಚಾರಕ್ಕೆ ಅಶ್ವಿನಿಹಾಗೂ ಪ್ರಿಯಕರನ ಜೊತೆ ಗಲಾಟೆ ನಡೆದಿದೆ. ಗಲಾಟೆ ಬಳಿಕ ಅಶ್ವಿನಿ ಕುಣಿಕೆ ಜೊತೆ ಸೆಲ್ಪೀ ತೆಗೆದುಕೊಂಡಿದ್ದಳು. ಅಶ್ವಿನಿಅಂತ್ಯಕ್ರಿಯೆ ಮುಗಿಸಿ ಬಂದ ಪೋಷಕರು ಅಶ್ವಿನಿ ಮೊಬೈಲ್ ನೋಡಿದಾಗ ಯುವಕನಿಗೆ ಮೆಸೇಜ್, ಕಾಲ್ ಮಾಡಿರುವುದು ಗೊತ್ತಾಗಿದೆ. ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿ ಈಕೆ ಸೂಸೈಡ್ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಸಂಬಂಧ ಯುವಕನ ವಿರುದ್ಧ ಪೋಷಕರು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.