ದಾವಣಗೆರೆ: ಶಿಕ್ಷಕನಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 22.41 ಲಕ್ಷ ರೂಪಾಯಿ ವಂಚಿಸಿದ್ದ ಸೈಬರ್ ವಂಚರ್ಕರಲ್ಲಿ ಓರ್ವ ಆರೋಪಿಯನ್ನು ದಾವಣಗೆರೆವ್ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊರಟಗೆರೆ ಮೂಲದ ಅರುಣ್ ಬಂಧಿತ ಆರೋಪಿ. ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಮಾರ್ಚ್ 12ರಂದು ಬ್ಲೂ ಡಾರ್ಟ್ ಕೊರಿಯರ್ ಹೆಸರಲ್ಲಿ ಪಾರ್ಸಲ್ ಬಂದಿದೆ. ಮುಂಬೈನಿಂದ ದುಬೈಗೆ ಕಳುಹಿಸುತ್ತಿದ್ದ ಪಾರ್ಸಲ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ನಿಮಗೆ ತಿಂಗಳಿಗೆ 20 ಲಕ್ಷ ಆದಾಯವಿದೆ ಎಂದು ತಿಳಿದುಬಂದಿದೆ. ಪಾರ್ಸಲ್ ನಲ್ಲಿ ಡ್ರಗ್ಸ್ ಸಿಕ್ಕಿದ್ದರಿಂದ ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು ಎಂದು ವಂಚಕರು ಶಿಕ್ಷಕರೊಬ್ಬರಿಗೆ ಕರೆ ಮಾಡಿ ಹೆದರಿಸಿದ್ದರು.
ಅಲ್ಲದೇ ಶಿಕ್ಷಕನ ಬ್ಯಾಂಕ್ ಖಾತೆಯ ವಿವರ ಪಡೆದು ಖಾತೆಯಿಂದ ಹಣ ಪಡೆದಿದ್ದರು. 19 ಲಕ್ಷ ರೂಪಾಯಿ ಫೀಜ್ ಮಾಡಿದರು. ವಂಚನೆಗಿಒಳಗಾದ ಶಿಕ್ಷಕ ದಾವಣಗೆರೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರುಣ್ ಎಂಬ ಆರೋಪಿಯನ್ನು ಬಂದ್ಜಿಸಿದ್ದು, ಇನ್ನಿಬ್ಬರಿಗಾಗಿ ಬಲೆಬೀಸಿದ್ದಾರೆ.