ರಾಮನಗರ: ಚಲಿಸುತ್ತಿದ್ದ ಬಸ್ ನ ಟೈಯರ್ ಸ್ಪೋಟಗೊಂಡು ಬೈಕ್ ಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾಗಡಿ ತಾಲೂಕಿನ ಜಟ್ಟನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ. ಅರಳಕುಪ್ಪೆ ಗ್ರಾಮದ ಗಂಗಮ್ಮ(58), ಶಿವಣ್ಣ(45) ಮೃತಪಟ್ಟವರು. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಅತ್ತೆ ಗಂಗಮ್ಮ ಅವರನ್ನು ಅಳಿಯ ಶಿವಣ್ಣ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಪಕ್ಕದಲ್ಲೇ ಸಾಗಿದ ಖಾಸಗಿ ಬಸ್ ನ ಟೈಯರ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಬಸ್ ನಿಂದ ಬೇರ್ಪಟ್ಟ ಟೈಯರ್ ಬೈಕ್ ಗೆ ಅಪ್ಪಳಿಸಿದ್ದು, ಗಂಗಮ್ಮ ಮತ್ತು ಶಿವಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.