ಗಡ್ಚಿರೋಲಿ: ಗಡ್ಚಿರೋಲಿ-ನಾರಾಯಣಪುರ ಗಡಿಯಲ್ಲಿ 8 ಗಂಟೆಗಳ ಕಾಲ ನಡೆದ ಎನ್ಕೌಂಟರ್ ನಂತರ ಬುಧವಾರ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಡ್ಚಿರೋಲಿ-ನಾರಾಯಣಪುರ ಗಡಿಯಲ್ಲಿರುವ ಕೋಪರ್ಶಿ ಅರಣ್ಯ ಪ್ರದೇಶದಲ್ಲಿ ಸುಮಾರು 8 ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯ ನಂತರ, 4 ಮಾವೋವಾದಿಗಳ(1 ಪುರುಷ ಮತ್ತು 3 ಮಹಿಳೆ) ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. 4 ಶಸ್ತ್ರಾಸ್ತ್ರಗಳು- 1 ಎಸ್ಎಲ್ಆರ್ ರೈಫಲ್, 2 ಐಎನ್ಎಸ್ಎಎಸ್ ರೈಫಲ್ಗಳು ಮತ್ತು 1.303 ರೈಫಲ್ಗಳು ಪತ್ತೆಯಾಗಿವೆ. ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಗಡ್ಚಿರೋಲಿಯ ಎಸ್ಪಿ ನೀಲೋತ್ಪಾಲ್ ಹೇಳಿದ್ದಾರೆ.
ಪೂರ್ವ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಛತ್ತೀಸ್ಗಢ ಗಡಿಯ ಬಳಿ ಬುಧವಾರ ಬೆಳಿಗ್ಗೆ ಪೊಲೀಸರು ಮತ್ತು ನಕ್ಸಲರ ನಡುವೆ ಎನ್ಕೌಂಟರ್ ನಡೆದ ನಂತರ ಈ ಬೆಳವಣಿಗೆ ಸಂಭವಿಸಿದೆ. ನಕ್ಸಲರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗಡ್ಚಿರೋಲಿ ಪೊಲೀಸರ ಸಿ-60 ಕಮಾಂಡೋ ತಂಡವು ಕೋಪರ್ಶಿ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.