ಗಣೇಶ ಹಬ್ಬದಂದು (ಭಾದ್ರಪದ ಮಾಸದ ಶುಕ್ಲ ಚತುರ್ಥಿ) ಚಂದ್ರನನ್ನು ನೋಡಬಾರದು ಎನ್ನುತ್ತಾರೆ. ಯಾಕೆ ಗೊತ್ತಾ..?ಪುರಾಣದ ಕಥೆಯೊಂದರ ಪ್ರಕಾರ ಗಣೇಶನ ವಾಹನವಾದ ಇಲಿ ಮತ್ತು ಚಂದ್ರನ ನಗುವನ್ನು ಸಹಿಸದ ಗಣೇಶನು ಚಂದ್ರನಿಗೆ ಶಾಪ ನೀಡಿದನು. ಹೀಗಾಗಿ, ಆ ದಿನ ಚಂದ್ರನನ್ನು ನೋಡಿದರೆ ಸುಳ್ಳು ಆರೋಪಗಳು ಬರುತ್ತವೆ ಎಂದು ಹೇಳಲಾಗಿದೆ.
ಡೊಳ್ಳು ಹೊಟ್ಟೆಯ ಗಣೇಶನು ತನ್ನ ವಾಹನವಾದ ಇಲಿಯ ಮೇಲೆ ಹೋಗುತ್ತಾ ಇದ್ದಾಗ. ಆಕಸ್ಮಾತ್ ಆಗಿ ಕೆಳಗೆ ಬಿದ್ದನು. ಇದನ್ನ ನೋಡಿದ ಚಂದ್ರನು ನಸು ನಕ್ಕನು ಎನ್ನಲಾಗಿದೆ. ಚಂದ್ರನು ತನ್ನ ಸೌಂದರ್ಯದ ಬಗ್ಗೆ ಅಹಂಕಾರ ಪಟ್ಟು ಗಣೇಶನನ್ನು ನೋಡಿ ನಕ್ಕನು.
ಚಂದ್ರನ ಈ ನಗು ಮತ್ತು ಗೇಲಿಯನ್ನು ಸಹಿಸದ ಗಣೇಶನು ಚಂದ್ರನನ್ನು ಶಪಿಸಿ ಶಾಪ ಕೊಡುತ್ತಾನೆ. ಭಾದ್ರಪದ ಶುದ್ಧ ಚತುರ್ಥಿಯಂದು ಯಾರೂ ಚಂದ್ರನನ್ನು ನೋಡಬಾರದು, ನೋಡಿದವರು ಸುಳ್ಳು ಆರೋಪಕ್ಕೆ ಗುರಿಯಾಗುತ್ತಾರೆ ಎಂದು ಗಣೇಶನು ಶಾಪ ನೀಡುತ್ತಾನೆ.
ಚಂದ್ರನು ತನ್ನ ತಪ್ಪಿನ ಅರಿವಾಗಿ ಗಣೇಶನಲ್ಲಿ ಕ್ಷಮೆ ಯಾಚಿಸುತ್ತಾನೆ. ಇದರಿಂದ ಗಣೇಶನು ಶಾಪವನ್ನು ಕಡಿಮೆ ಮಾಡುತ್ತಾನೆ. ಆದರೂ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ ” ದೋಷ, ಅವಮಾನಗಳು” ತಟ್ಟುತ್ತದೆ ಎಂದು ಹೇಳಲಾಗಿದೆ.