ಭಾಗ್ಯಲಕ್ಷ್ಮೀ ಬಾಂಡ್ ಪರಿಪಕ್ವ ಮೊತ್ತ ಪಾವತಿ ಮಾಡಲಿದ್ದು, ಅಗತ್ಯ ದಾಖಲೆಗಳೊಂದಿಗೆ ನೋಂದಣಿಗೆ ಸೂಚನೆ ನೀಡಲಾಗಿದೆ.
ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ನೋಂದಣಿಯಾಗಿ 18 ವರ್ಷ ಪೂರ್ಣಗೊಂಡ ಫಲಾನುಭವಿಗಳು 2024-25ನೇ ಸಾಲಿನ ಪರಿಪಕ್ವ ಮೊತ್ತ ಪಡೆಯಲು ಅರ್ಹರಾಗಿರುತ್ತಾರೆ.
ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅರ್ಹ ಫಲಾನುಭವಿಗಳು ಎಲ್.ಐ.ಸಿ. ಭಾಗ್ಯಲಕ್ಷ್ಮೀ ಫಾರಂ ಭರ್ತಿ ಮಾಡಿ, ಫಾರಂನೊಂದಿಗೆ, ಮೂಲ ಬಾಂಡ್, ಮಗುವಿನ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್, ಶಾಲಾ ಧೃಡೀಕರಣ, ಮಗುವಿನ ಬ್ಯಾಂಕ್ ಖಾತೆ, ಮಗು, ತಂದೆ ಮತ್ತು ತಾಯಿ ಆಧಾರ್, ಅಪರೇಷನ್ ಕಾರ್ಡ್, ಚುಚ್ಚುಮದ್ದು ಕಾರ್ಡ್, ಅಂಗನವಾಡಿ ಕಾರ್ಯಕರ್ತೆ ಹಾಗೂ ಪೊಷಕರ ದೃಢೀಕರಣ ಲಗತ್ತಿಸಿ ಚಿತ್ರದುರ್ಗ ನಗರದ ಆರ್.ಟಿ.ಓ ಕಚೇರಿ ಸಮೀಪದ ಬಸಪ್ಪ ಆಸ್ಪತ್ರೆ ಹತ್ತಿರದ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.