ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಷನ್ ನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಆಯ ತಪ್ಪಿ ಏಕಾಏಕಿ ಮೆಟ್ರೋ ಯೆಲ್ಲೋ ಲೈನ್ ಹಳಿಗೆ ಬಿದ್ದ ಘಟನೆ ನಡೆದಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಈ ನಡೆದಿದೆ.ಮೆಟ್ರೋ ಲೈನ್ ಪಕ್ಕ ನಡೆದು ಬರುತ್ತಿದ್ದ ಸಿಬ್ಬಂದಿ ಏಕಾಏಕಿ ನಿಯಂತ್ರಣ ತಪ್ಪಿ ಹಳದಿ ಲೈನ್ ಹಳಿ ಮೇಲೆ ಬಿದ್ದಿದ್ದಾರೆ.
ಅದೃಷ್ಟವಶಾತ್ ಯಾವುದೇ ಅವಘಡ ನಡೆದಿಲ್ಲ.ಪ್ರಯಾಣಿಕರೊಬ್ಬರು ರಕ್ಷಣೆಗೆ ಧಾವಿಸಿ ಭದ್ರತಾ ಸಿಬ್ಬಂದಿಯ ಕೈ ಹಿಡಿದು ಮೇಲಕ್ಕೆತ್ತಿದ್ದಾರೆ.ಮೆಟ್ರೋ ನಿಲ್ದಾಣದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿದಾಡುತ್ತಿದೆ.
WATCH: #BengaluruMetro witnessed a close call this morning when a security guard accidentally fell onto the track at the newly opened Raggigudda station on the #YellowLine. The incident occurred around 11.10 a.m. on August 25.
— Darshan Devaiah B P (@DarshanDevaiahB) August 25, 2025
Read Full Article: https://t.co/cMYXiVRXQN pic.twitter.com/pnuEQXOZHw