ನವದೆಹಲಿ : ಆನ್ ಲೈನ್ ಗೇಮ್ ಗೆ ಕೇಂದ್ರ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆ ಬಿಸಿಸಿಐ ಡ್ರೀಮ್ 11 ಪ್ರಾಯೋಜಕತ್ವ ಮುರಿದುಕೊಂಡಿದೆ. ಈ ಬಗ್ಗೆ ಇಂದು ಬಿಸಿಸಿಐ ಘೋಷಿಸಿದೆ. ಡ್ರೀಮ್ 11 ಪ್ರಾಯೋಜಕತ್ವದ ಮೂಲಕ ಬಿಸಿಸಿಐ 1000 ಕೋಟಿ ಗಳಿಸಿತ್ತು.
ಗುರುವಾರ ಸಂಸತ್ತಿನ ಎರಡೂ ಸದನಗಳು ಆನ್ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಅಂಗೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಡ್ರೀಮ್ 11 ಬೇರೆಯಾಗಲಿವೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬೆಳವಣಿಗೆಯನ್ನು ದೃಢಪಡಿಸಿದರು, ಭಾರತೀಯ ಕ್ರಿಕೆಟ್ ಮಂಡಳಿಯು ಭವಿಷ್ಯದಲ್ಲಿ “ಅಂತಹ ಯಾವುದೇ ಸಂಸ್ಥೆಗಳೊಂದಿಗೆ ಭಾಗಿಯಾಗುವುದಿಲ್ಲ” ಎಂದು ಹೇಳಿದರು. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ಮತ್ತು ಮಸೂದೆ ಕಾಯಿದೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಬಿಸಿಸಿಐ ಡ್ರೀಮ್ 11 ಅನ್ನು ಮುಂದುವರಿಸುವುದು ನಿಜವಾಗಿಯೂ ಕಷ್ಟಕರವಾಗಿರುತ್ತದೆ ಎಂದರು. ಆದ್ದರಿಂದ, ಡ್ರೀಮ್ 11 ಜೊತೆಗಿನ ಸಂಬಂಧನ್ನು ಮುರಿದುಕೊಂಡು ಬಿಸಿಸಿಐ ಹೊಸ ಪ್ರಾಯೋಜಕರನ್ನು ಹುಡುಕುತ್ತಿದೆ.