ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಅವರಿಗೆ ಝಡ್ ಶ್ರೇಣಿಯ ಸಿಆರ್ ಪಿಎಫ್ ವಿಐಪಿ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿತ್ತು. ಇದೀಗ ಆ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ.
ದೆಹಲಿ ಸಿಎಂ ರೇಖಾ ಗುಪ್ತಾ ಜನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಗುಜರಾತ್ ಮೂಲದ ಸಕರಿಯಾ ರಾಜೇಶ್ ಭಾಯ್ ಎಂಬಾತ ಸಿಎಂ ಮೇಲೆ ಹಲ್ಲೆ ನಡೆಸಿದ್ದ. ಸದ್ಯ ಆತನನ್ನು ಬಂಧಿಸಲಾಗಿದೆ. ಇದು ಸಿಎಂ ಹತ್ಯೆಗೆ ನಡೆಸಿರುವ ಯೋಜಿತ ಸಂಚಿನ ಭಾಗ ಎಂದು ಸಿಎಂ ಕಚೇರಿ ಹೇಳಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಿಎಂ ರೇಖಾ ಗುಪ್ತಾ ಅವರಿಗೆ ಝಡ್ ಶ್ರೇಣಿಯ ಸಿಆರ್ ಪಿಎಫ್ ಭದ್ರತೆ ಕಲ್ಪಿಸಿತ್ತು. ಇದೀಗ ಸಿಆರ್ ಪಿಎಫ್ ಭದ್ರತೆ ಪಂಪಡೆಯಲಾಗಿದ್ದು, ದೆಹಲಿ ಪೊಲೀಸರೇ ಸಿಎಂ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.