BIG NEWS: ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು, ಮಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು ಸಂಚಾರ

ಬೆಂಗಳೂರು: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಜನಟ್ಟಣೆ ನಿಯಂತ್ರಿಸಲು ವಿಶೇಷ ರೈಲು ಸೇವೆ ಆರಂಭಿಸಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳಿಗೆ ಬೆಂಗಳೂರು ಮತ್ತು ಮಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ. ವಡಗಾಂವ್, ಬೀದರ್, ಹುಬ್ಬಳ್ಳಿ ಮತ್ತು ಮಂಗಳೂರಿಗೆ ಈ ರೈಲುಗಳು ಕಾರ್ಯಾಚರಣೆ ನಡೆಸಲಿವೆ.

ವಿಶೇಷ ರೈಲಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ:

ಬೆಂಗಳೂರು-ಮಡಗಾಂವ್ ಎಕ್ಸ್​​ಪ್ರೆಸ್​​
ರೈಲು ಸಂಖ್ಯೆ 06569: ಎಸ್​ಎಮ್​ವಿಟಿ ಬೆಂಗಳೂರು-ಮಡಗಾಂವ್​ ರೈಲು ಆಗಸ್ಟ್​ 26 ರಂದು ಎಸ್​​ಎಮ್​ವಿಟಿ ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ನಸುಕಿನ ಜಾವ 5:30ಕ್ಕೆ ಮಡಗಾಂವ್​ ತಲುಪಲಿದೆ.

ಇದೇ ರೈಲು ವಾಪಸ್​ 06570: ಆಗಸ್ಟ್​ 27 ರಂದು ಬೆಳಿಗ್ಗೆ 6:30ಕ್ಕೆ ಮಡಗಾಂವ್​ನಿಂದ ಹೊರಟು ಅದೇ ದಿನ ರಾತ್ರಿ 11:40 ಎಸ್​ಎಮ್​ವಿಟಿ ಬೆಂಗಳೂರು ತಲುಪಲಿದೆ.

ಈ ರೈಲು ಚಿಕ್ಕಬಾನಾವರ, ಕುಣಿಗಲ್​, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್​, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್​, ಅಂಕೋಲ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲ್ಲುತ್ತದೆ.

ಬೆಂಗಳೂರು-ಬೀದರ್ ರೈಲು
ರೈಲು ಸಂಖ್ಯೆ 06549: ಎಸ್​ಎಮ್​ವಿಟಿ ಬೆಂಗಳೂರು-ಬೀದರ್​ ರೈಲು ಆಗಸ್ಟ್​ 26 ರಂದು ರಾತ್ರಿ 9:15ಕ್ಕೆ ಎಸ್​ಎಮ್​ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ.
ಇದೇ ರೈಲು ವಾಪಸ್​ 06550: ಬೀದರ್​ನಿಂದ ಆಗಸ್ಟ್​ 27 ರಂದು ಮಧ್ಯಾಹ್ನ 2:30ಕ್ಕೆ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಎಸ್​ಎಮ್​ವಿಟಿ ಬೆಂಗಳೂರು ತಲುಪಲಿದೆ.

ಯಲಹಂಕ, ಹಿಂದುಪುರ, ಧರ್ಮಾವರಮ್, ಅನಂತಪುರ, ಗುಂಟಕಲ್​, ಅದೋನಿ, ಮಂತ್ರಾಲಯಂ ರೋಡ್​, ರಾಯಚೂರು, ಕೃಷ್ಣಾ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ ಮತ್ತು ಹುಮನಾಬಾದ​ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಬೆಂಗಳೂರು-ಹುಬ್ಬಳ್ಳಿ ರೈಲು
ರೈಲು ಸಂಖ್ಯೆ 07341: ಎಸ್‌ಎಸ್‌ಎಸ್ ಹುಬ್ಬಳ್ಳಿ-ಯಶವಂತಪುರ ರೈಲು ಆಗಸ್ಟ್​ 25 ರಂದು ಮಧ್ಯಾಹ್ನ 3:30 ಕ್ಕೆ ಯಶವಂತಪುರದಿಂದ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಹುಬ್ಬಳ್ಳಿ ತಲುಪಲಿದೆ.
ರೈಲು ಸಂಖ್ಯೆ 07342: ಯಶವಂತಪುರ- ಎಸ್​ಎಸ್​ಎಸ್​ ಹುಬ್ಬಳ್ಳಿ ರೈಲು ಆಗಸ್ಟ್​ 28 ರಂದು ಯಶವಂತಪುರದಿಂದ ಮಧ್ಯರಾತ್ರಿ 12:15 ಕ್ಕೆ ಹೊರಟು ಬೆಳಿಗ್ಗೆ 09:45 ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ತಲುಪಲಿದೆ.

ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ ಮತ್ತು ತುಮಕೂರು ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ.

ಬೆಂಗಳೂರು-ಮಂಗಳೂರು
ರೈಲು ಸಂಖ್ಯೆ 06251: ಯಶವಂತಪುರ-ಮಂಗಳೂರು ಸೆಂಟ್ರಲ್​ ರೈಲು ಯಶವಂತಪುರದಿಂದ ಆಗಸ್ಟ್​ 25 ರಂದು ರಾತ್ರಿ 11:55ಕ್ಕೆ ಮರುದಿನ ಬೆಳಗ್ಗೆ 11:45 ಕ್ಕೆ ಮಂಗಳೂರು ಸೆಂಟ್ರಲ್​ಗೆ ತಲುಪುತ್ತದೆ.
ರೈಲು ಸಂಖ್ಯೆ 06252: ಮಂಗಳೂರು ಸೆಂಟ್ರಲ್​-ಯಶವಂತಪುರ ರೈಲು ಆಗಸ್ಟ್​ 26 ರಂದು ಮಧ್ಯಾಹ್ನ 1ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಅದೇ ದಿನ ರಾತ್ರಿ 10:40 ಕ್ಕೆ ಯಶವಂತಪುರ ತಲುಪುತ್ತದೆ.

ರೈಲು ಸಂಖ್ಯೆ 06253: ಯಶವಂತಪುರ-ಮಂಗಳೂರು ಸೆಂಟ್ರಲ್​ ರೈಲು ಆಗಸ್ಟ್​ 26 ರಂದು ಯಶವಂತಪುರದಿಂದ ರಾತ್ರಿ 11:55 ಕ್ಕೆ ಹೊರಟು ಮರುದಿನ ಬೆಳಗ್ಗೆ 11:45 ಮಂಗಳೂರು ಸೆಂಟ್ರಲ್ ತಲುಪುತ್ತದೆ.

ರೈಲು ಸಂಖ್ಯೆ 06254: ಮಂಗಳೂರು ಸೆಂಟ್ರಲ್-ಯಶವಂತಪುರ ರೈಲು ಆಗಸ್ಟ್​ 27 ರಂದು ಮಧ್ಯಾಹ್ನ 2:15 ಕ್ಕೆ ಮಂಗಳೂರು ಸೆಂಟ್ರಲ್​ನಿಂದ ಹೊರಟು ಅದೇ ದಿನ ರಾತ್ರಿ 11:50 ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು ಮತ್ತು ಬಂಟವಾಳದಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಗಳಿವೆ.
ರೈಲು ಸಂಚಾರ ದಿನಾಂಕ ವಿಸ್ತರಣೆ

ಈ ಹಿಂದೆ ಆಗಸ್ಟ್​ 31 ರವರೆಗೆ ಸಂಚರಿಸುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 06539 SMVT ಬೆಂಗಳೂರು-ಬೀದರ್ ದ್ವೈವಾರಿಕ ವಿಶೇಷ ಎಕ್ಸ್‌ಪ್ರೆಸ್ ರೈಲು, ಸೆಪ್ಟೆಂಬರ್ 05 ರಿಂದ 28 ರವರೆಗೆ ಸಂಚರಿಸಲಿದೆ.

ಈ ಹಿಂದೆ ಸೆಪ್ಟೆಂಬರ್ 01 ರವರೆಗೆ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 06540 ​​ಬೀದರ್-SMVT ಬೆಂಗಳೂರು ದ್ವೈವಾರಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಸೆಪ್ಟೆಂಬರ್​ 06 ರಿಂದ 29 ರವರೆಗೆ ಸಂಚರಿಸಲಿದೆ.

ಈ ಹಿಂದೆ ಆಗಸ್ಟ್​ 25 ರವರೆಗೆ ಮಾತ್ರ ಸಂಚರಿಸುವುದಾಗಿ ಸೂಚಿಸಲಾಗಿದ್ದ ರೈಲು ಸಂಖ್ಯೆ 07315 SSS ಹುಬ್ಬಳ್ಳಿ-ಮುಜಫರ್‌ಪುರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 01 ರಿಂದ 22 ರವರೆಗೆ ಸಂಚರಿಸಲಿದೆ.

ಈ ಹಿಂದೆ ಆಗಸ್ಟ್​ 28 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07316 ಮುಜಫರ್​ಪುರ್-ಎಸ್‌ಎಸ್‌ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 04 ರಿಂದ 12 ರವರೆಗೆ ಸಂಚರಿಸಲಿವೆ.

ಈ ಹಿಂದೆ ಆಗಸ್ಟ್​ 25 ರವರೆಗೆ ಮಾತ್ರ ಓಡುವುದಾಗಿ ತಿಳಿಸಲಾಗಿದ್ದ ರೈಲು ಸಂಖ್ಯೆ 07311 ವಾಸ್ಕೋ ಡ ಗಾಮಾ-ಮುಜಫರ್ ಪುರ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್, ಈಗ ಸೆಪ್ಟೆಂಬರ್​ 8 ರಿಂದ 22 ರವರೆಗೆ ಸಂಚರಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read