ನವದೆಹಲಿ: ಕನಿಷ್ಠ ಸಿಬಿಲ್ ಸ್ಕೋರf ಇಲ್ಲವೆನ್ನುವ ಒಂದೇ ಕಾರಣಕ್ಕೆ ಮೊದಲ ಸಲ ಸಾಲಕ್ಕೆ ಅರ್ಜಿ ಸಲ್ಲಿಸಿದವರಿಗೆ ಬ್ಯಾಂಕುಗಳು ಸಾಲ ನಿರಾಕರಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಲೋಕಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿದ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಅವರು, ಹೊಸ ಸಾಲಗಾರರ ಅರ್ಜಿಗಳನ್ನು ಹಿಂದಿನ ಸಾಲ ಇತಿಹಾಸವಿಲ್ಲ ಎನ್ನುವ ಕಾರಣಕ್ಕೆ ತಿರಸ್ಕರಿಸುವಂತಿಲ್ಲವೆಂದು ಆರ್ಬಿಐ ಈಗಾಗಲೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.
ಮೊದಲ ಸಲ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಇಂತಿಷ್ಟೇ ಇರಬೇಕು ಎಂದು ಆರ್ಬಿಐ ನಿಗದಿ ಮಾಡಿಲ್ಲ. ಸಾಲ ನೀಡುವ ಹಣಕಾಸು ಸಂಸ್ಥೆಗಳು ಅನುಮೋದಿತ ನೀತಿಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ತಮ್ಮ ನಿರ್ಧಾರ ಕೈಗೊಳ್ಳುತ್ತವೆ. ಕ್ರೆಡಿಟ್ ಮಾಹಿತಿ ವರದಿ ಅಂಶಗಳಲ್ಲಿ ಒಂದು ಅಂಶ ಮಾತ್ರವೆಂದು ಅವರು ತಿಳಿಸಿದ್ದಾರೆ.