BIG NEWS: ಸಾರ್ವಜನಿಕರ ಗಮನಕ್ಕೆ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಬೆಂಗಳೂರು: ವೀಕೇಂಡ್ ನಲ್ಲಿಯೇ ಬೆಂಗಳೂರಿಗರಿಗೆ ಪವರ್ ಕಟ್ ಬಿಸಿ ತಟ್ಟಲಿದೆ. ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನಲ್ಲಿ ಇಂದು ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್​ ಕಡಿತಗೊಳಿಸಲಾಗುತ್ತಿದೆ.

ವಿದ್ಯುತ್ ಪ್ರಸರಣ ಜಾಲದ ತುರ್ತು ನಿರ್ವಹಣೆ ಮತ್ತು ನವೀಕರಣ ಕಾರ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಇಂದು ವಿದ್ಯುತ್ ಕಡಿತ ಅನಿವಾರ್ಯವಾಗಿದೆ. ಇದು ಮುಂದಿನ ದಿನಗಳಲ್ಲಿ ವಿಶ್ವಾಸಾರ್ಹ ಮತ್ತು ನಿರಂತರ ವಿದ್ಯುತ್ ಸರಬರಾಜು ಒದಗಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

ಎಚ್​​ಎಂಟಿ ರಸ್ತೆ, ಆರ್​ ಎನ್​​ಎಸ್​​ ಅಪಾರ್ಟ್​​ ಮೆಂಟ್​, ಸಿಎಂಟಿಐ, ಬೋರಲಿಂಗಪ್ಪ ಗಾರ್ಡನ್​, ಪೀಣ್ಯ ಪೊಲೀಸ್​​ ಠಾಣೆ ರಸ್ತೆ, ಟೆಲಿಪೋನ್​​ ಎಕ್ಸ್​ ಚೇಂಜ್​, ರಿಲಯನ್ಸ್​​ ಕಮ್ಯುನಿಕೇಷನ್​, ಗಣಪತಿನಗರ ಮುಖ್ಯರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮಲಯಾಳಿ ಅತಿಥಿಗೃಹ ರಸ್ತೆ, ಕೆಎಚ್​​ ಬಿ ಲೇಔಟ್​, ಬ್ಯಾಂಕ್​​ ಕಲೊನಿ, ಯುಕೊ ಬ್ಯಾಂಕ್​​ ರಸ್ತೆ, ರಾಜಗೋಪಾಲ ನಗರ, ಕಸ್ತೂರಿ ಬಡಾವಣೆ, ಜೆಕೆಡಬ್ಲೂ ಲೇಔಟ್​, ಇಎಸ್​​ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್​ ಸಂಪರ್ಕ ಇರುವುದಿಲ್ಲ.

ನೆಲಗೆದರನಹಳ್ಳಿ, ಸಬ್​​ ಸ್ಟೇಷನ್​ ವ್ಯಾಪ್ತಿಯ ಕೆಂಪಯ್ಯ ಗಾರ್ಡನ್​​, ಶಿಗರಳಪಾಳ್ಯ ಮುಖ್ಯರಸ್ತೆ, ಮಾರುತಿ ಇಂಡಸ್ಟ್ರಿಯಲ್​ ಎಸ್ಟೇಟ್​, ಎಚ್​ ಎಂಟಿ ಲೇಜೌಟ್​​, ಶಿವಪುರ, ಗೃಹಲಕ್ಷಿ ಲೇಔಟ್​, ಶಿವಪುರ ಲೇಔಟ್​​, ವಿನಾಯನಗರ, 8ನೇ ಮೈಲಿ ರಸ್ತೆ, ಜಾಲಹಳ್ಳಿ ಕ್ರಾಸ್​, ಶೋಭಾ ಅಪಾರ್ಟ್​ ಮೆಂಟ್​, ಅಮರಾಮತಿ ಲೇಔಟ್​, ಕೆಎಪಿಎಲ್​, ಕರ್ನಾಟಕ ಆ್ಯಂಟಿಬಯೋಟಿಕ್ಸ್​​ ಪ್ರೈವೇಟ್​​ ಲಿಮಿಟೆಡ್​​, ರುಕ್ಮಿಣಿನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್​ ಸಂಪರ್ಕ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read