ಮಂಗಳೂರು: ಧರ್ಮಸ್ಥಳದ ವಿಬಿಧೆಡೆ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ದೂರುದಾರ ಮುಸುಕುಧಾರಿ ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಧರ್ಮಸ್ಥಳ ದೇವಾಲಯ ಶಿವತಾಂಡವದ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂದೇಶ ರವಾನಿಸಿದೆ.
ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ ರೀತಿಯಲ್ಲಿ ಫೋಟೋ ಅನಾವರಣ ಮಾಡಲಾಗಿದೆ. ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಗುಂಪೊಂದು ಷಡ್ಯಂತ್ರ ನಡೆಸಿ ಸುಳ್ಲಿನ ಕಥೆ ಕಟ್ಟಿತ್ತು. ಇದೀಗ ಒಂದೊಂದೇ ಸುಳ್ಳುಗಳು ಹೊರಬರುತ್ತಿದ್ದು, ಷಡ್ಯಂತ್ರ ನಡೆಸಿದವರ ಬಂಧನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯದ ಆಡಳಿತ ಮಂಡಳಿ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಶಿವ ರುದ್ರತಾಂಡವದ ಫೋಟೋ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡುವವರಿಗೆ ಖಡಕ್ ಸಂದೇಶ ನೀಡಿದೆ.