ಮಂಗಳೂರು: ತಮಿಳುನಾಡಿನಲ್ಲಿದ್ದ ನನ್ನನ್ನು ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಗುಂಪೊಂದು ನನ್ನನ್ನು ಕತೆರಂದಿತ್ತು ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.
ಎಸ್ ಐಟಿ ವಿಚಾರಣೆ ವೇಳೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಹಲವು ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ತಮಿಳುನಾಡಿನಲ್ಲಿದ್ದ ನನ್ನೌ ಧರ್ಮಸ್ಥಳ ವಿರೋಧಿ ಗ್ಯಾಂಗ್ ನನ್ನು ಭೇಟಿಯಾಗಿದೆ. ಮಾತುಕತೆ ವೇಳೆ ಹಣದ ಆಮಿಷವೊಡ್ದಿದೆ. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದಲೇ ಪ್ರಕರಣಕ್ಕೆ ರೋಚಕ ತಿರುವು ಎಂದಿದ್ದರು. ಯಾವ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ತನಿಖೆ ಬಳಿಕ ಹಲವು ದೂರುದಾರರು ಬರುತ್ತಾರೆ. ಆರಂಭದಲ್ಲಿ ಬೆಂಗಳೂರಿನಲ್ಲಿ ನನಗೆ ತರಬೇತಿ ನೀಡಲಾಗಿತ್ತು. ಯಾವ ರೀತಿ ಉತ್ತರ ಕೊಡಬೇಕು ಎಂದು ಹೇಳಿಕೊಡಲಾಗಿತ್ತು. ಬೈಕ ಸೂತ್ರಧಾರ ಹೇಳಿಕೊಟ್ಟಂತೆ ನಾನು ಮಾತನಾಡುತ್ತಿದ್ದೆ ಎಂದಿದ್ದಾನೆ.
ಇನ್ನು ಸುಜಾತಾಭಟ್ ದೂರು ನೀಡುವವರೆಗೂ ನನಗೆ ಭಯವಿತ್ತು. ಆಕೆ ದೂರು ಕೊಟ್ಟ ಬಳಿಕ ನನಗೆ ಧೈರ್ಯ ಬಂತು ಎಂದು ಕೂಡ ಮಾಸ್ಕ್ ಮ್ಯಾನ್ ಹೇಳಿದ್ದಾನೆ ಎನ್ನಲಾಗಿದೆ. ನನ್ನನ್ನು ಕರೆದುಕೊಂಡು ಬಂದಿರುವ ಗ್ಯಾಂಗ್ ನಿಂದ 2 ಲಕ್ಷ ಹಣವನ್ನು ಪಡೆದುಕೊಂಡಿರುವುದಾಗಿಯೂ ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.