ಬೆಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣ ದಿನಕ್ಕೊಂದು ತಿರುವುಪಡೆಯುತ್ತಿದೆ. ಇಷ್ಟು ದಿನ ಅನನ್ಯಾ ಭಟ್ ನನ್ನ ಮಗಳು ಎಂದು ಹೇಳಿಕೊಂಡಿದ್ದ ಸುಜತಾ ಭಟ್ ಇದೀಗ ಉಲ್ಟಾ ಹೊಡೆದಿದ್ದಾರೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಸುಜಾತಾ ಭಟ್, ನಾನು ಹೇಳಿದ್ದು ಸುಳ್ಳು. ಅನನ್ಯಾ ಭಟ್ ಎಂಬ ಮಗಳೇ ನನಗಿಲ್ಲ. ಯಾರೋ ನನ್ನನ್ನು ಹೀಗೆ ಹೇಳು ನಿನ್ನನ್ನು ರಕ್ಷಣೆ ಮಾಡುತ್ತೇವೆ ಎಂದರು. ಹಾಗಾಗಿ ಹೇಳಿದ್ದೇನೆ ಎಂದಿದ್ದಾರೆ.
ಗಿರೀಶ್ ಮಟ್ಟಣ್ಣವರ್, ಜಯಂತ್ ಸೇರಿ ಇನ್ನೂ ಹಲವರು ಸೇರಿಕೊಂಡು ಹೀಗೆ ಹೇಳಬೇಕು ಎಂದು ಹೇಳಿದ್ದರು. ಯಾಕೆ ಹೀಗೆ ಹೇಳಬೇಕು ಎಂದು ಕೇಳಿದ್ದಕ್ಕೆ ನಿನಗೆ ಸಹಾಯ ಮಾಡುತ್ತೇವೆ ಎಂದರು. ನನ್ನನ್ನು ಕೂಡಿ ಹಾಕಿ ಹಲ್ಲೆ ನಡೆಸಿ ಬೆದರಿಸಿ ನನ್ನಿಂದ ಸುಳ್ಳು ಹೇಳಿಸಿದ್ದಾರೆ. ನಾನು ಎಸ್ ಐಟಿ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.
ಆಸ್ತಿ ವಿಚಾರವಾಗಿ ಅನನ್ಯಾ ಭಟ್ ಕಥೆ ಕಟ್ಟಿದ್ದೆ. ನನಗೆ ಈರೀತಿ ಆಗುತ್ತೆ. ಇದು ಇಷ್ಟರ ಮಟ್ಟಿಗೆ ಹೋಗುತ್ತೆ ಎಂದು ಗಿತ್ತಿರಲಿಲ್ಲ. ಅವರು ನನ್ನನ್ನು ದುರುಪಯೋಗಪಡಿಸಿಕೊಂಡರು. ನಾನು ದೇಶದ ಜನತೆಗೆ, ಕರ್ನಾಟಕ ಜನತೆಗೆ ಕ್ಷಮೆ ಕೇಳುತ್ತೇನೆ. ಧರ್ಮಸ್ಥಳಕ್ಕೂ ಕ್ಷಮೆ ಕೇಳುತ್ತೇನೆ. ನನ್ನನ್ನು ಇದರಿಂದ ಮುಕ್ತಿಗೊಳುಸಿ ಎಂದು ಹೇಳಿಕೊಂಡಿದ್ದಾರೆ.
ಮತ್ತೆ ಕೆಲವೇ ಗಂಟೆಗಳಲ್ಲಿ ಮಾದ್ಯಮಗಳ ಮುಂದೆ ಬಂದ ಸುಜಾತಾ ಭಟ್, ಅನನ್ಯಾ ನನ್ನ ಮಗಳೆ ಈ ವಿಚಾರದಲ್ಲಿ ನನಗೆ ನ್ಯಾಯ ಬೇಕು. ಆಸ್ತಿಗಾಗಿ ನಾನು ಹೀಗೆ ಮಾಡಿಲ್ಲ. ರೌಡಿಸಂ ಮಾಡಿ ನನಗೆ ಹೀಗೆ ಹೇಳಿಸಿದರು. ಗಿರೀಶ್ ಮಟ್ಟೆಣ್ಣವರ್, ತಿಮರೋಡಿ, ಜಯಂತ್ ವಿರುದ್ಧವೂ ಹೇಳಿಕೆ ಕೊಟ್ಟರೆ ನಿನ್ನನ್ನು ಬಚಾವ್ ಮಾಡುತ್ತೇವೆ ಅನ್ನೋದಾಗಿ ಹೇಳಿದ್ದಾರೆ ಎಂದು ಮತ್ತೆ ಉಲ್ಟಾ ಹೊಡೆದಿದ್ದಾರೆ. ಒಟ್ಟಾರೆ ಸುಜಾತಾ ಭಟ್ ಹೇಳಿಕೆ ಯಾವುದು ಸತ್ಯ? ಯಾವುದು ಸುಳ್ಳು? ಎಂಬುದು ಎಸ್ ಐಟಿ ತನಿಖೆಯಿಂದಲೇ ಹೊರಬರಬೇಕಿದೆ.