BIG NEWS : ಉಭಯ ಸದನಗಳಲ್ಲಿ ‘ಕರ್ನಾಟಕ ಅಂತರ್ಜಲ ತಿದ್ದುಪಡಿ 2025ರ ವಿಧೇಯಕ’ ಅಂಗೀಕಾರ.!

ಬೆಂಗಳೂರು : ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) ತಿದ್ದುಪಡಿ 2025ರ ವಿಧೇಯಕವು ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದೆ.

ಈ ವಿಧೇಯಕದನ್ವಯ ಕೈಗಾರಿಕೆ, ಗಣಿಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಅಂತರ್ಜಲ ಬಳಕೆ ಮಾಡುವವರು, ಟ್ಯಾಂಕರ್ ನೀರು ಸರಬರಾಜು ಮಾಡುವವರು ಕಡ್ಡಾಯವಾಗಿ ನೀರಾಪೇಕ್ಷಣ ಪತ್ರ ಪಡೆಯಬೇಕು. ಕುಡಿಯುವ ನೀರು, ಗೃಹಬಳಕೆಗೆ, ರೈತರ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸುವುದಕ್ಕೆ ಅನುಮತಿ ಪಡೆಯುವುದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅಂತರ್ಜಲ ಸಂರಕ್ಷಿಸುವ ನಿಟ್ಟಿನಲ್ಲಿ, ಕಾನೂನು ಉಲ್ಲಂಘನೆಯಾದರೆ ಕಠಿಣ ಶಿಕ್ಷೆವಿಧಿಸುವ ಅವಕಾಶವನ್ನೂ ಈ ವಿಧೇಯಕದಲ್ಲಿ ಕಲ್ಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಬೋಸರಾಜು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read