ತುಮಕೂರು: ಕುಣಿಗಲ್ ನ ಹಂಗರಹಳ್ಳಿ ವಿದ್ಯಾ ಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮೀಜಿಗೆ ಬೆದರಿಕೆ ಹಾಕಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ತುಮಕೂರಿನ ಯೂಟ್ಯೂಬರ್ ಓರ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಧೀಂದ್ರ ಬಂಧಿತ ಆರೋಪಿ. ಸುಧೀಂದ್ರ ಜನವರಿ 21ರಿಂದ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಜೂನ್ 28ರಂದು ಮಠದ ಸಿಬ್ಬಂದಿ ಅಭಿಲಾಷ್, ಸುರೇಶ್, ಭಕ್ತರಾದ ಬೀಚನಹಳ್ಳಿ ಕರಿಗೌಡ ಅವರನ್ನು ಸಂಪರ್ಕಿಸಿ ಮಠಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೊಂದಿದ್ದು, ಅವುಗಳನ್ನು ಪ್ರಕಟಿಸಿದರೆ ಮಠದ ಹೆಸರು ಹಾಳಾಗುತ್ತದೆ. ಪ್ರವಾಸ ಮಾಡಬಾರದು ಎಂದಾದರೆ ೨೫ ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದ.
ಹಣ ನೀಡದ ಹಿನ್ನೆಲೆಯಲ್ಲಿ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಸುಧೀಂದ್ರ, ಪುಣ್ಯ ಕ್ಷೇತ್ರ-ಕೇತ್ರ ಪಾಪಿ ಬಾಲ ಮೌಢ್ಯ ಲೀಲೆ-ಭಾಗ 1 ನಂತರ 17ರಂದು ಭಾಗ 2 ಪ್ರಸಾರ ಮಾಡಿದ್ದಾನೆ. ಇವೆಲ್ಲವೂ ಕಪೋಲಕಲ್ಪಿತ ಹಾಗೂ ಆಧಾರರಹಿತ ಆರೋಪಗಳಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಲ ಮಂಜುನಾಥ ಸ್ವಾಮೀಜಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಧೀಂದ್ರನನ್ನು ಬಂಧಿಸಲಾಗಿದೆ.