ಬೆಂಗಳೂರು: ವಿಧಾನಸಭೆ ಕಲಾಪದ ವೇಲೆ ಆರ್.ಎಸ್.ಎಸ್ ಗೀತೆ ಹಾಡುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅಚ್ಚರಿ ಮೂಡಿಸಿದ್ದಾರೆ. ಆರ್.ಎಸ್.ಎಸ್ ಗೀತೆ ಹಾಡಿದ್ದನ್ನು ಕೇಳಿ ಕಾಂಗ್ರೆಸ್ ನಾಯಕರೇ ಹುಬ್ಬೇರಿಸಿದ್ದಾರೆ.
ಸದನದ ಕಲಾಪದ ಬಳಿಕ ವಿಧನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಆರ್ ಎಸ್ ಎಸ್ ಗೀತೆ ಹೇಳಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಸಂಘ, ಸಂಸ್ಥೆಗಳ ಬಗ್ಗೆ ತಿಳಿದುಕೊಂಡಿದ್ದೀನಿ. ಆಗಾಗ ಆರ್.ಎಸ್.ಎಸ್ ಬಗ್ಗೆ ರಿಸರ್ಚ್ ಮಾಡುತ್ತಿರುತ್ತೇನೆ. ಕಮ್ಯೂನಿಸ್ಟ್ ಬಗ್ಗೆಯೂ ಸಂಶೋಧನೆ ಮಾಡಿದ್ದೀನಿ. ಆರ್ ಎಸ್ ಎಸ್, ಬಿಜೆಪಿ, ಜನತಾ ದಳದ ಬಗ್ಗೆ ರಿಸರ್ಚ್ ಮಾಡುತ್ತಿರುತ್ತೇನೆ. ಎಲ್ಲಾ ಸಂಘಟನೆಗಳಲ್ಲಿಯೂ ಒಂದೊಂದು ಗುಣಗಳು ಇರುತ್ತವೆ ಎಂದರು.
ಕೆಲ ಒಳ್ಳೆಯ ಗುಣಗಳನ್ನು ಗುರುತಿಸಿ ಹೇಳಿದ್ದೇನೆ. ಆದರೆ ಬಿಜೆಪಿಯವರು ಮಾತ್ರ ಯಾವಾಗಲೂ ರಾಜಕೀಯ ಮಾದುತ್ತಿರುತ್ತಾರೆ ಎಂದು ಹೇಳಿದರು.