ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳುರಿನಲ್ಲಿ ಬಿಎಂಟಿಸಿ ಬಸ್ ಅಟ್ಟಹಾಸಕ್ಕೆ ಪ್ರತಿದಿನ ಒಬ್ಬರಾದರೂ ಸಾವನ್ನಪ್ಪುವ ಸ್ಥಿತಿ ಎದುರಾಗಿದೆ. ಅದರಲ್ಲಿಯೂ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳಿಂದಲೇ ಅಪಘಾತಗಳು ಹೆಚ್ಚುತ್ತಿವೆ ಎಂದು ತಿಳಿದುಬಂದಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗೆ ಕಳೆದ ಒಂದು ವಾರದಲ್ಲಿ ನಾಲ್ವರು ಬಲಿಯಾಗಿದ್ದಾರೆ. ೧೫ ತಿಂಗಳಲ್ಲಿ ೧೮ ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಚಾಲಕರ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯವೇ ಕಾರಣವಾಗಿದೆ.
ಬಿಎಂಟಿಸಿ ಬಸ್ ಗಳಿಗೆ ಸರವಜನಿಕರು, ಬೈಕ್ ಸವಾರರು ಬಲಿಯಾಗುತ್ತಿದ್ದಾರೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಚಾಲಕರು ಖಾಸಗಿ ಚಾಲಕರಾಗಿದ್ದು, ನಿರ್ಲಕ್ಷ್ಯದಿಂದ ಹಾಗೂ ಅತಿಯಾದ ವೇಗದಲ್ಲಿ ಬಸ್ ಗಳನ್ನು ಓಡಿಸುತ್ತಾರೆ. ಇದರಿಂದಾಗಿ ಅಪಘಾತಗಳು ಹೆಚ್ಚುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ.