ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ 3352.57 ಕೋಟಿ ರೂ. ವೆಚ್ಚ ಮಾಡಲು ಅವಕಾಶ ಕಲ್ಪಿಸುವ ಮೊದಲ ಕಂತಿನ ಪೂರಕ ಅಂದಾಜುಗಳಿಗೆ ವಿಧಾನಸಭೆಯಲ್ಲಿ ಗುರುವಾರ ಒಪ್ಪಿಗೆ ನೀಡಲಾಗಿದೆ.
ವಿಧಾನಸಭಾ ಅಧಿವೇಶನದಲ್ಲಿ ಪೂರಕ ಅಂದಾಜು ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಪೂರಕ ಅಂದಾಜು ವೆಚ್ಚವು ಬಜೆಟ್ ಗಾತ್ರದ ಶೇಕಡ 0.78ರಷ್ಟು ಇದೆ. ತೆರಿಗೆ ವಸೂಲಾತಿ ಹೆಚ್ಚಳ, ಮರು ಹೊಂದಾಣಿಕೆ ಮೂಲಕ ಅಗತ್ಯ ಬಿದ್ದರೆ ಸಾಲ ಮಾಡಿ 3352.57 ಕೋಟಿ ರೂ. ಹೊಂದಿಸಿ ವೆಚ್ಚ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ನಡೆದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂ., ಕೇರಳದ ವಯನಾಡಿನಲ್ಲಿ ಉಂಟಾದ ಪ್ರವಾಹದಿಂದ ಸಂತ್ರಸ್ತರಿಗೆ ಮನೆ ನಿರ್ಮಿಸಲು 10 ಕೋಟಿ ರೂಪಾಯಿ ನೆರವು ನೀಡಲು ಪೂರಕ ಅಂದಾಜಿನಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಾಧನಾ ಸಮಾವೇಶಕ್ಕೆ ಪಕ್ಷದಿಂದ ವೆಚ್ಚ ಮಾಡಬೇಕು. ಸರ್ಕಾರದ ವೆಚ್ಚದಲ್ಲಿ ಇದನ್ನು ಸೇರಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.