ಧರ್ಮಸ್ಥಳದಲ್ಲಿ ನ್ಯಾಯ ಕೇಳುತ್ತಿರುವವರನ್ನು ಬಂಧಿಸಲು ರಾಜ್ಯ ಸರ್ಕಾರ ‘ಪೊಲೀಸ್ ಯಂತ್ರ’ವನ್ನು ದುರುಪಯೋಗಪಡಿಸುತ್ತಿದೆಯೆ ? : ನಟ ಚೇತನ್ ಅಹಿಂಸಾ

ಬೆಂಗಳೂರು :   ಧರ್ಮಸ್ಥಳದಲ್ಲಿ ನ್ಯಾಯ ಕೇಳುತ್ತಿರುವವರನ್ನು ಬಂಧಿಸಲು ರಾಜ್ಯ ಸರ್ಕಾರ ಪೊಲೀಸ್ ಯಂತ್ರವನ್ನು ದುರುಪಯೋಗಪಡಿಸುತ್ತಿದೆಯೆ? ಎಂದು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡ ಅವರು ಧರ್ಮಸ್ಥಳದಲ್ಲಿ ನ್ಯಾಯ ಕೇಳುತ್ತಿರುವವರನ್ನು ಬಂಧಿಸಲು ರಾಜ್ಯ ಸರ್ಕಾರ ಪೊಲೀಸ್ ಯಂತ್ರವನ್ನು ದುರುಪಯೋಗಪಡಿಸುತ್ತಿದೆಯೆ?

ಹಿಂಸೆಗೆ ಪ್ರೋತ್ಸಾಹ ನೀಡುವ ಅಥವಾ ಜಾತಿ/ಲಿಂಗ/ಧರ್ಮ ಆಧಾರಿತ ನಿಂದನಾತ್ಮಕ ಮಾತುಗಳನ್ನು ನಾವು ಒಪ್ಪಲಾಗದು. ಆದರೆ, ಸರ್ಕಾರವು ಭಾರತ ಸಂವಿಧಾನದ ಆರ್ಟಿಕಲ್ 19ನ ಪ್ರಕಾರ ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಾಪಾಡಬೇಕು.

ಮಾಧ್ಯಮಗಳ ಪ್ರಕಾರ, ಯೂಟ್ಯೂಬರ್ ಸಮೀರನ್ನು ಬಂಧಿಸುವ ಸಾಧ್ಯತೆ ಇದೆ — ಇಂಥ ವರ್ತನೆಗೆ ಸಮೀರ್ ಏನು ತಪ್ಪು ಮಾಡಿದ್ದಾರೆ? ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.   

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read