ಶ್ರೀನಗರ: ಸಹಪೊಲೀಸ್ ಕಾನ್ಸ್ ಟೇಬಲ್ ಗೆ ಮರ್ಮಾಂಗ ಕತ್ತರಿಸಿ ಚಿತ್ರಹಿಂಸೆ ನೀಡಿದ್ದ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು 8 ಪೊಲೀಸರನ್ನು ಬಂಧಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಈ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಜಮ್ಮು-ಕಾಶ್ಮೀರದ 8 ಪೊಲೀಸರನ್ನು ಬಂಧಿಸಿದ್ದಾರೆ. ಮಾದಕ ವಸ್ತು ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಶಂಕೆಯಲ್ಲು ಕಾನ್ಸ್ ಟೇಬಲ್ ಖುರ್ಷಿದ್ ಅಹ್ಮದ್ ಚೋಹನ್ ಅವರಿಗೆ ಆರು ದಿನಗಳ ಕಾಲ ಚಿತ್ರಹಿಂಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 8 ಪೊಲೀಸರನ್ನು ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು ಸುದೀರ್ಘ ವಿಚಾರಣೆ ಬಳಿಕ ೮ ಜನರನ್ನು ಬಂಧಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸಿಬಿಐ, ಉಪ ಪೊಲೀಸ್ ವರಿಷ್ಠಾಧಿಕಾರಿ ಐಜಾಜ್ ಅಹ್ಮದ್ ನಾಯ್ಕೊ ಸೇರಿದಂತೆ ಇತರ ಏಳು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಎಂಟು ಪೊಲೀಸರನ್ನು ಕುಪ್ವಾರದ ಜಂಟಿ ವಿಚರಣಾ ಕೇಂದ್ರದಲ್ಲಿ ನಿಯೋಜಿಸಲಾಗಿತ್ತು. ತನಿಖೆ ವೇಳೆ ಚೋಹನ್ ವಿರುದ್ಧ ಅಮಾನವೀಯ ವರ್ತನೆಗೆ ಸಹಾಯ ಮಾಡಿದ್ದಾಗಿ ಹಾಗೂ ತನಿಖೆಗೆ ಅಸಹಕಾರ ತೋರಿದ್ದಾಗಿ ಸಿಬಿಐ ಇನ್ನೂ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಪತ್ತೆ ಮಾಡಿದೆ.
2023ರಲ್ಲಿ ಫೆಬ್ರವರಿ 26ರಂದು ಮಾದಕವಸ್ತು ಕಳ್ಳಸಾಗಣೆಗೆ ಸಹಾಯಮಾಡಿದ ಸಂಶಯದ ಮೇರೆಗೆ ಕಾನ್ಸ್ ಟೇಬಲ್ ಖುರ್ಷಿದ್ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ೮ ಪೊಲೀಸರು ಆರು ದಿನಗಳ ಕಾಲ ಚಿತ್ರಹಿಂಸೆ ನೀದಿದ್ದರು. ಖುರ್ಷಿದ್ ಅವರ ಖಾಸಗಿ ಭಾಗಗಳನ್ನು ಕತ್ತರಿಸಿ, ಕಬ್ಬಣಿದ ಸರಳುಗಳನ್ನು ಹಾಕಿ ಹಿಂಸಿಸಿದ್ದರು. ಅಲ್ಲದೇ ಅವರ ಗುದನಾಳಕ್ಕೆ ಕೆಂಪು ಮೆಣಸನ್ನು ಹಾಕಿ ವಿದ್ಯುತ್ ಶಾಕ್ ಸಹ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಖುರ್ಷಿದ್ ಪತ್ನಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರ ಮಾಡಿತ್ತು.