ತಿರುವನಂತಪುರಂ: ಶಾಲೆಯ ಆವರಣದಲ್ಲಿ ಸಿಕ್ಕ ವಸ್ತುವನ್ನು ಬಾಲಕನೊಬ್ಬ ಎತ್ತಿ ಬಿಸಾಕುತ್ತಿದ್ದಂತೆ ಸ್ಫೋಟಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡಕ್ಕಂತರಾದಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆವರಣದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು ಅವುಗಳು ಅಪಾಯಕಾರಿ ವಸ್ತುಗಳೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ನೀಡಿದ್ದಾರೆ.
ಶಾಲೆ ಆವರಣದಲ್ಲಿ ಸಿಕ್ಕ ವಸ್ತುವನ್ನು ಅದುಸ್ಫೋಟಕ ಎಂದು ತಿಳಿಯದ ಬಾಲಕ ಅದನ್ನು ಎಸೆದಿದ್ದಾನೆ. ಈ ವೇಳೆ ವಸ್ತು ಸ್ಫೋಟಗೊಂಡಿದೆ. ಪರುಣಾಮ ಬಾಲಕ ನಾರಾಯಣ್ (10) ಹಾಗೂ ಓರ್ವ ಮಹಿಳೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲೆಯ ಕಾಂಪೋಂಡ್ ಬಳಿ ಸ್ಫೋಟಕಗಳನ್ನು ಇಟ್ಟಿದ್ದವರು ಯಾರೆಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.