ಹಾಸನ: ನಾಯಿ ಬೊಗಳಿದ್ದಕ್ಕೆ ವಿಚಲಿತಗೊಂಡ ಒಂಟಿ ಸಲಗ ಬನೆಯ ಬಳಿ ನಿಲ್ಲಿಸಿದ್ದ ಕಾರನ್ನೇ ಎತ್ತಿ ಬಿಸಾಅಕಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅರೇಹಳ್ಲಿ ಗ್ರಾಮಕ್ಕೆ ನುಗ್ಗಿದ್ದ ಕಾಡಾನೆ ಕಂಡು ನಾಯಿಗಳು ಬೊಗಳಿವೆ. ಇದರಿಂದ ಕೋಪಗೊಂಡ ಆನೆ ಗ್ರಾಮದಲ್ಲಿ ಹಲವೆಡೆ ದಾಂಧಲೆ ನಡೆಸಿದೆ. ಇದೇ ವೇಳೆ ಮನೆಯೊಂದರ ಬಳಿ ನಿಂತಿದ್ದ ಆಲ್ಟೋ ಕಾರನ್ನು ಆನೆ ಎತ್ತಿ ಎಸೆದಿದೆ. ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ.
ಆನೆಯ ಪುಂಡಾಟಕ್ಕೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಗಳು ಆನೆ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.