ಹಾಸನ: ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆಯಲ್ಲಿ ನಡೆದಿದೆ.
ವೇಗವಾಗಿ ಟ್ರ್ಯಾಕ್ಟರ್ ಓಡಿಸಿಕೊಂಡು ರೀಲ್ಸ್ ಮಾಡುತ್ತಿದ್ದ 19 ವರ್ಷದ ಕಿರಣ್ ಕುಮಾರ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ. ಅರಕಲಗೂಡು ತಾಲೂಕು ಬಿ.ಜಿ. ಕೊಪ್ಪಲು ಗ್ರಾಮದ ಕಿರಣ್ ಕುಮಾರ್ ಕೊಣನೂರು ಹೋಬಳಿಯ ಕಬ್ಬಳ್ಳಿಗೆರೆ ಬೆಟ್ಟದ ಮೇಲೆ ಬುಧವಾರ ಸ್ನೇಹಿತರೊಂದಿಗೆ ರೀಲ್ಸ್ ಮಾಡಲು ಬೆಟ್ಟಕ್ಕೆ ಬಂದಿದ್ದ. ವೇಗವಾಗಿ ಟ್ರ್ಯಾಕ್ಟರ್ ಓಡಿಸಿ ತಿರುಗಿಸುವಾಗ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಟ್ಯಾಕ್ಟರ್ ಅಡಿಗೆ ಬಿದ್ದು ಕಿರಣ್ ಕುಮಾರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೊಣನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.