ನವದೆಹಲಿ: ನೈಜ ಹಣ ಪಾವತಿಸಿ ಆಡುವ ಎಲ್ಲಾ ರೀತಿಯ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಆನ್ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ವಿಧೇಯಕ- 2025 ಬುಧವಾರ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಹಣವಿಟ್ಟು ಆಡುವ ಎಲ್ಲಾ ಆನ್ಲೈನ್ ಗೇಮ್ ಗಳು ಇನ್ನೂ ಕಡ್ಡಾಯ ನಿಷೇಧವಾಗಿದ್ದು, ಉಲ್ಲಂಘಿಸಿದರೆ ಮೂರು ವರ್ಷ ಜೈಲು ಶಿಕ್ಷೆ, ಒಂದು ಕೋಟಿ ರೂ. ದಂಡ ವಿಧಿಸಲಾಗುವುದು.
ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಗೇಮ್ ಗಳು ಮಕ್ಕಳು, ಯುವಕರಲ್ಲಿ ದೊಡ್ಡ ಮಟ್ಟದ ಚಟಕ್ಕೆ ಕಾರಣವಾಗಿ ಆತಂಕ ಮೂಡಿಸಿದ್ದವು. ದೇಶದಲ್ಲಿ ಪ್ರತಿವರ್ಷ ಅಂದಾಜು 45 ಕೋಟಿ ಜನ ಗೇಮಿಂಗ್ ಮೂಲಕ 20,000 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದರು. ಇಂತಹ ಅಕ್ರಮ ಹಣ ವರ್ಗಾವಣೆ ದೊಡ್ಡ ಜಾಲವಾಗಿ ಹೊರಹೊಮ್ಮಿದ್ದು, ದೇಶದ ಭದ್ರತೆಗೆ ಅಪಾಯ ತಂದ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಆನ್ ಲೈನ್ ಆಟಗಳನ್ನು ನಿಷೇಧಿಸುವ ಆನ್ಲೈನ್ ಗೇಮ್ ಗಳ ಮೇಲೆ ನಿಯಂತ್ರಣಕ್ಕೆ ಕಠಿಣ ಕಾಯ್ದೆ ತರಲಾಗಿದೆ,
ಕಾಯ್ದೆ ಅನ್ವಯ ಆನ್ಲೈನ್ ಗೇಮ್ ಗೆ ನಿರ್ವಹಣೆ, ವೇದಿಕೆ ಕಲ್ಪಿಸುವುದು, ಜಾಹಿರಾತು ಪ್ರಸಾರ ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ಹಣಕಾಸು ಸಂಸ್ಥೆಗಳು ಇಂತಹ ಗೇಮಿಂಗ್ ಹಣದ ವರ್ಗಾವಣೆಯನ್ನು ಕಾಯ್ದೆ ಸಂಪೂರ್ಣ ನಿಷೇಧಿಸುತ್ತದೆ.